ಶ್ರೀರಂಗಪಟ್ಟಣ: ಜಾಮೀಯ ಮಸೀದಿ ವಿಚಾರದಲ್ಲಿ ತಹಶೀಲ್ದಾರ್ ಶ್ವೇತ ಎಡವಟ್ಟು – ಹಿಂದೂಗಳಿಗೆ ಬಲ

Team Newsnap
2 Min Read
Jamia Masjid: Illegal madrasa: Hindu Vigilance Forum deadline for eviction ಜಾಮಿಯಾ ಮಸೀದಿಯಲ್ಲಿ : ಅಕ್ರಮ ಮದರಸಾ : ತೆರವಿಗೆ ಹಿಂದೂ ಜಾಗರಣ ವೇದಿಕೆ ಗಡುವು

ಶ್ರೀರಂಗಪಟ್ಟಣದ ವಿವಾದಿತ ಜಾಮೀಯಾ ಮಸೀದಿ ಪ್ರಕರಣಕ್ಕೆ ಇದೀಗ ಶ್ರೀರಂಗಪಟ್ಟಣದ ತಹಶೀಲ್ದಾರ್ ಮಾಡಿರುವ ಎಡವಟ್ಟೊಂದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಜಾಮೀಯ ಮಸೀದಿಗೂ ಮೊದಲು ಅದು ಹಿಂದೂ ದೇಗುಲವಾಗಿತ್ತೆಂಬ ಹಿಂದು ಸಂಘಟನೆಗಳು ಮಾಡುತ್ತಿದ್ದ ವಾದಕ್ಕೆ ಪುಷ್ಟಿ‌ ಸಿಕ್ಕಿದೆ, ಇದನ್ನು ಓದಿ – ಮಂಡ್ಯದಲ್ಲಿ ಕರ್ತವ್ಯದ ನೆಪ : ಮೈಸೂರಿನಲ್ಲಿ ಅರಣ್ಯ ಅಧಿಕಾರಿಗಳ ಪಾರ್ಟಿಗೆ ಸಿಬ್ಬಂದಿ ಹಾಜರು

ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿಗೂ ಮೊದಲೇ ಆ ಜಾಗದಲ್ಲಿ ಮೂಡಲಬಾಗಿಲು ಆಂಜನೇಯ ಸ್ವಾಮಿ ಮೂಲ ಮಂದಿರ ಇತ್ತು ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ವಾದ ಮಂಡಿಸುತ್ತಿದ್ದರು.

WhatsApp Image 2022 06 03 at 12.39.49 PM

ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ರವೀಂದ್ರ ಶಾಂತಿ ಸುವ್ಯವಸ್ಥೆಗಾಗಿ ನಿಷೇಧಾಜ್ಞೆ ಆದೇಶ ಮಾಡಿದ್ದಾರೆ ಆ ಆದೇಶ ಪತ್ರದಲ್ಲಿ ಪಟ್ಟಣದ ಜಾಮಿಯಾ ಮಸೀದಿ ಶ್ರೀ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಮೂಲ ಮಂದಿರ ಎಂದು ನಮೂದಿಸಿದ್ದಾರೆ. ಈ ಉಲ್ಲೇಖ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜಾಮೀಯ ಮಸೀದಿಗೂ ಮೊದಲು ಅದು ಹಿಂದೂ ದೇಗುಲವಾಗಿತ್ತೆಂಬ ಹಿಂದು ಸಂಘಟನೆಗಳು ಮಾಡುತ್ತಿದ್ದ ವಾದಕ್ಕೆ ಪುಷ್ಟಿ‌ ಸಿಕ್ಕಿದೆ, ಇದನ್ನು ಓದಿ – ಕರ್ನಾಟಕದಲ್ಲಿ 4 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ, ಬೆಂಗಳೂರಿಗೆ ಹಳದಿ ಎಚ್ಚರಿಕೆ ನೀಡಿದ IMD

ತಹಶೀಲ್ದಾರರ ಈ ಉಲ್ಲೇಖ ಹಿಂದೂ ಸಂಘಟನೆಗಳಿಗೆ ಅಸ್ತ್ರ ಸಿಕ್ಕಂತಾಗಿದೆ. ಈ ಹಿಂದಿನ ಗೆಜೆಟ್‌ನಲ್ಲಿ ಇರುವ ಆದೇಶದನ್ವಯ ಈ ಆದೇಶ ಹೊರಡಿಸಿದ್ದಾರೆ ಅಥವಾ ತಹಶೀಲ್ದಾರ್ ಶ್ವೇತ ಅವರೇ ಈ ಎಡವಟ್ಟು ಮಾಡಿದ್ದಾರೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಮಂಡ್ಯದಲ್ಲಿ ಕರ್ತವ್ಯದ ನೆಪ : ಮೈಸೂರಿನಲ್ಲಿ ಅರಣ್ಯ ಅಧಿಕಾರಿಗಳ ಪಾರ್ಟಿಗೆ ಸಿಬ್ಬಂದಿ ಹಾಜರು

ಮಂಡ್ಯದ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಬಹುತೇಕ ಸಿಬ್ಬಂದಿ ಕರ್ತವ್ಯದ ವೇಳೆಯಲ್ಲೇ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಮೈಸೂರಿಗೆ ಪಾರ್ಟಿಗೆ ತೆರಳಿರುವ ಪ್ರಕರಣ ನಡೆದಿದೆ.

ಮೈಸೂರು ವಿಭಾಗದ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಟಿ.ವೆಂಕಟೇಶ್‌ಸೇವೆಯಿಂದ ನಿವೃತ್ತಿಯಾಗಿದ್ದರು

ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅವರ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ಪಾರ್ಟಿಯಲ್ಲಿ ಪಾಲ್ಗೊಳ್ಳಲು ಮಂಡ್ಯ ಕಚೇರಿಯ ಬಹುತೇಕ ಸಿಬ್ಬಂದಿ ಸಾಮೂಹಿಕವಾಗಿ ಮೈಸೂರಿಗೆ ತೆರಳಿದ್ದರು. ಕೆಲವರಂತೂ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ತೆರಳಿದ್ದರು.
ಕಚೇರಿಗೆ ಗೈರಾಗಿದ್ದರು

ಈ ಹಿಂದೆ ವೆಂಕಟೇಶ್‌ ಅವರು ಮಂಡ್ಯದಲ್ಲೂ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದರು. ಮಂಡ್ಯದಲ್ಲಿದ್ದಾಗ ಅವರ ನಿವಾಸ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಎಸಿಬಿ ಅಧಿಕಾರಿಗಳು ದಾಳಿ ಬಳಿಕ ವೆಂಕಟೇಶ್‌ ಅವರು ಮೈಸೂರಿಗೆ ವರ್ಗಾವಣೆಯಾಗಿದ್ದರು. ಇದೀಗ ಅಲ್ಲೇ ಸೇವಾವಧಿ ಪೂರೈಸಿ ನಿವೃತ್ತಿಯಾಗಿದ್ದಾರೆ.

ಅವರ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ಪಾರ್ಟಿಯಲ್ಲಿ ಪಾಲ್ಗೊಳ್ಳಲು ಮಂಡ್ಯ ಕಚೇರಿಯ ಬಹುತೇಕ ಸಿಬ್ಬಂದಿ ಸಾಮೂಹಿಕವಾಗಿ ಮೈಸೂರಿಗೆ ತೆರಳಿದ್ದರಿಂದ
ಇಡೀ ಕಚೇರಿ ಬಹುತೇಕ ಸಿಬ್ಬಂದಿಯಿಲ್ಲದೆ ಖಾಲಿಯಾಗಿತ್ತು. ಬೆರಳೆಣಿಕೆಯ ಸಿಬ್ಬಂದಿ ಮಾತ್ರ ಕಚೇರಿಯಲ್ಲಿ ಹಾಜರಿದ್ದರು.

Share This Article
Leave a comment