ಮಂಡ್ಯದಲ್ಲಿ ಕರ್ತವ್ಯದ ನೆಪ : ಮೈಸೂರಿನಲ್ಲಿ ಅರಣ್ಯ ಅಧಿಕಾರಿಗಳ ಪಾರ್ಟಿಗೆ ಸಿಬ್ಬಂದಿ ಹಾಜರು

Team Newsnap
2 Min Read
Forest guard dies in forest fire ಕಾಡ್ಗಿಚ್ಚಿಗೆ ಬಲಿಯಾದ ಫಾರೆಸ್ಟ್ ಗಾರ್ಡ್ ಸಾವು

ಮಂಡ್ಯದ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಬಹುತೇಕ ಸಿಬ್ಬಂದಿ ಕರ್ತವ್ಯದ ವೇಳೆಯಲ್ಲೇ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಮೈಸೂರಿಗೆ ಪಾರ್ಟಿಗೆ ತೆರಳಿರುವ ಪ್ರಕರಣ ನಡೆದಿದೆ.

ಮೈಸೂರು ವಿಭಾಗದ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಟಿ.ವೆಂಕಟೇಶ್‌ಸೇವೆಯಿಂದ ನಿವೃತ್ತಿಯಾಗಿದ್ದರು. ಇದನ್ನು ಓದಿ – ಕರ್ನಾಟಕದಲ್ಲಿ 4 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ, ಬೆಂಗಳೂರಿಗೆ ಹಳದಿ ಎಚ್ಚರಿಕೆ ನೀಡಿದ IMD

ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅವರ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ಪಾರ್ಟಿಯಲ್ಲಿ ಪಾಲ್ಗೊಳ್ಳಲು ಮಂಡ್ಯ ಕಚೇರಿಯ ಬಹುತೇಕ ಸಿಬ್ಬಂದಿ ಸಾಮೂಹಿಕವಾಗಿ ಮೈಸೂರಿಗೆ ತೆರಳಿದ್ದರು. ಕೆಲವರಂತೂ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ತೆರಳಿದ್ದರು ಕಚೇರಿಗೆ ಗೈರಾಗಿದ್ದರು

ಈ ಹಿಂದೆ ವೆಂಕಟೇಶ್‌ ಅವರು ಮಂಡ್ಯದಲ್ಲೂ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದರು. ಮಂಡ್ಯದಲ್ಲಿದ್ದಾಗ ಅವರ ನಿವಾಸ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದನ್ನು ಓದಿ – ಕಲಬುರಗಿಯ ಕಮಲಾಪುರ ತಾಲೂಕಿನ 7 ಪ್ರಯಾಣಿಕರು ಸಜೀವವಾಗಿ ಸಾವನ್ನಪ್ಪಿರುವ ಘಟನೆ ಜರುಗಿದೆ

ಎಸಿಬಿ ಅಧಿಕಾರಿಗಳು ದಾಳಿ ಬಳಿಕ ವೆಂಕಟೇಶ್‌ ಅವರು ಮೈಸೂರಿಗೆ ವರ್ಗಾವಣೆಯಾಗಿದ್ದರು. ಇದೀಗ ಅಲ್ಲೇ ಸೇವಾವಧಿ ಪೂರೈಸಿ ನಿವೃತ್ತಿಯಾಗಿದ್ದಾರೆ.

ಅವರ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ಪಾರ್ಟಿಯಲ್ಲಿ ಪಾಲ್ಗೊಳ್ಳಲು ಮಂಡ್ಯ ಕಚೇರಿಯ ಬಹುತೇಕ ಸಿಬ್ಬಂದಿ ಸಾಮೂಹಿಕವಾಗಿ ಮೈಸೂರಿಗೆ ತೆರಳಿದ್ದರಿಂದ
ಇಡೀ ಕಚೇರಿ ಬಹುತೇಕ ಸಿಬ್ಬಂದಿಯಿಲ್ಲದೆ ಖಾಲಿಯಾಗಿತ್ತು. ಬೆರಳೆಣಿಕೆಯ ಸಿಬ್ಬಂದಿ ಮಾತ್ರ ಕಚೇರಿಯಲ್ಲಿ ಹಾಜರಿದ್ದರು.

ಮಂಡ್ಯದ ವಿಕಲಾಂಗನ ಸಮಸ್ಯೆಗೆ ಎರಡೇ ದಿನಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ

ಅಂಗವಿಕಲರೊಬ್ಬರ ಆಧಾರ ಕಾರ್ಡ್ ಸಮಸ್ಯೆ 2 ವರ್ಷದಿಂದ ಸ್ಪಂದನೆ ಮಾಡದ ಮಂಡ್ಯ ಜಿಲ್ಲಾಡಳಿತ ಹಾಗೂ ತಾಲೂಕು ಕಚೇರಿಗೆ ಪ್ರಧಾನಿ ಮೋದಿ ಕಾರ್ಯಾಲಯವು ಕೇವಲ ಎರಡೇ ದಿನ ಸ್ಪಂದನೆ ಮಾಡಿ ತಂಡಸನಹಳ್ಳಿ ನೂತನ್ ಸಮಸ್ಯೆಗೆ ಪರಿಹಾರ ಸಿಕ್ಕಿದೆ

ಮಂಡ್ಯದ ಅಂಗವಿಕಲ ನೂತನ್ ಆಧಾರ್ ಸಮಸ್ಯೆಯಿಂದಾಗಿ ಸರ್ಕಾರಿ ಸೌಲಭ್ಯಗಳಿಂದ ವಂಚಿತನಾಗಿದ್ದರು

ಚರ್ಮ ಕಾಯಿಲೆಯಿಂದ ಆಧಾರ್ ಕಾರ್ಡ್‌ನಿಂದ ವಂಚಿನಾಗಿದ್ದ ನೂತನ್ ಗೆ ಈ ಹಿಂದೆ ಮಾಡಿಸಿದ್ದ ಆಧಾರ್ ಗೆ ಮೊಬೈಲ್ ನಂಬರ್ ಲಿಂಕ್ ಆಗದಿರೋದ್ರಿಂದ ಬ್ಲಾಕ್ ಆಗಿತ್ತು. ಮತ್ತೆ ಆಕ್ಟೀವ್ ಮಾಡಿಸಲು ಸಮಸ್ಯೆಯಾಗಿದ್ದು ಈ ಚರ್ಮ ಕಾಯಿಲೆ.

ಬಯೋಮೆಟ್ರಿಕ್ ಆತನ ಗುರುತು ತೆಗೆದುಕೊಳ್ಳುತ್ತಿರಲಿಲ್ಲ, ಕಣ್ಣಿನ ಸ್ಕ್ಯಾನ್ ಆಗಿರಲಿಲ್ಲ. ಸಮಸ್ಯೆ ಪರಿಹರಿಸುವಂತೆ ಮಂಡ್ಯ ಡಿಸಿ, ಸಂಸದೆ ಸುಮಲತಾಗೆ ಮನವಿ ನೀಡಿದರೂ ಯಾವ ಪರಿಹಾರವೂ ಸಿಗಲಿಲ್ಲ

ಆಗ ಈ ನೂತನ್ ರೈತ ಮುಖಂಡ ಮಧುಚಂದನ್ ಬಳಿ ತನ್ನ ಸಮಸ್ಯೆ ಹೇಳಿಕೊಂಡಿದ್ದ. ನೂತನ್ ಅಕ್ಕ ಸಂಧ್ಯಾ ನರೇಂದ್ರ ಮೋದಿಗೆ ಪತ್ರ ಬರೆದು, ಪ್ರಧಾನಿ ಕಚೇರಿಗೆ ಟ್ಯಾಗ್ ಮಾಡಿದ್ದ ಮಧುಚಂದನ್.

ಟ್ವೀಟ್ ಮಾಡಿದ ಒಂದೇ ದಿನಕ್ಕೆ ಅಧಿಕಾರಿಗಳಿಂದ ನೂತನ್ ಗೆ ಫೋನ್ ಕರೆ, ಎರಡನೇ ದಿನವೇ ಆಧಾರ್ ಕಾರ್ಡ್ ಆಕ್ಟೀವ್ ಆಗಿದೆ
ಸಮಸ್ಯೆ ಪರಿಹಾರದ ಬಳಿಕ ನರೇಂದ್ರ ಮೋದಿ, ರೈತ ಮುಖಂಡ ಮಧುಚಂದನ್ ಗೆ ನೂತನ್ ಕುಟುಂಬ ಧನ್ಯವಾದ ಹೇಳಿದೆ

Share This Article
Leave a comment