July 7, 2022

Newsnap Kannada

The World at your finger tips!

BUS ON FIRE

ಕಲಬುರಗಿಯ ಕಮಲಾಪುರದ ಬಳಿ : ಭೀಕರ ಬಸ್​ ದುರಂತ 7 ಪ್ರಯಾಣಿಕರು ಸಜೀವದಹನ

Spread the love

ಕಲಬುರಗಿಯ ಕಮಲಾಪುರ ತಾಲೂಕಿನ ಹೊರವಲಯದಲ್ಲಿ ಭೀಕರ ಬಸ್​ ದುರಂತ ಸಂಭವಿಸಿದ್ದು, 7 ಪ್ರಯಾಣಿಕರು ಸಜೀವವಾಗಿ ಸಾವನ್ನಪ್ಪಿರುವ ಘಟನೆ ಜರುಗಿದೆ. ಗೂಡ್ಸ್ ಲಾರಿ ಮತ್ತು ಖಾಸಗಿ ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಖಾಸಗಿ ಬಸ್​ ಕಂದಕ್ಕೆ ಬಿದ್ದು ಬೆಂಕಿ ಹತ್ತಿಕೊಂಡು ಧಗ ಧಗ ಉರಿದಿದೆ.

ಇದನ್ನು ಓದಿ – ಮಂಡ್ಯದ ವಿಕಲಾಂಗನ ಸಮಸ್ಯೆಗೆ ಎರಡೇ ದಿನಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ

ಬಸ್​ನಲ್ಲಿ 35 ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದರು. ಗೋವಾದಿಂದ ಹೈದ್ರಾಬಾದ್​ಗೆ ಖಾಸಗಿ ಬಸ್ ತೆರಳುತ್ತಿತ್ತು ಎನ್ನಲಾಗಿದೆ. ದುರ್ಘಟನೆಯಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್​ಗೆ ಹತ್ತಿದ್ದ ಬೆಂಕಿಯನ್ನು ನಂದಿಸಲಾಗಿದೆ. ಆದರೆ ಬೆಂಕಿಯ ಕೆನ್ನಾಲಿಗೆಗೆ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ..

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಜಿಲ್ಲಾ ಎಸ್ಪಿ ಇಶಾ ಪಂತ್ ಸೇರಿದಂತೆ ಹಿರಿಯ ಪೋಲಿಸ್ ಅಧಿಕಾರಿಗಳು ಧಾವಿಸಿದ್ದಾರೆ.

error: Content is protected !!