JDS ಕನಸು ನುಚ್ಚು ನೂರು : ರಾಜ್ಯಸಭೆ ಕಣದಿಂದ 2ನೇ ಅಭ್ಯರ್ಥಿ ನಿವೃತ್ತಿ ಇಲ್ಲ – Ex CM ಸಿದ್ದರಾಮಯ್ಯ

Team Newsnap
1 Min Read

ಕಾಂಗ್ರೆಸ್​ ಬೆಂಬಲದೊಂದಿಗೆ ರಾಜ್ಯಸಭೆಗೆ ಕುಪೇಂದ್ರ ರೆಡ್ಡಿಯನ್ನು ಮತ್ತೆ ರಾಜ್ಯಸಭೆಗೆ ಕಳುಹಿಸಿಬೇಕು ಎಂಬ ಜೆಡಿಎಸ್​ ಕನಸನ್ನು ಮಾಜಿ ಸಿಎಂ ಸಿದ್ದರಾಮಯ್ಯ ನುಚ್ಚುನೂರು ಮಾಡಿದ್ದಾರೆ,ರಾಜ್ಯಸಭಾ ಕಣದಿಂದ ಯಾವುದೇ ಕಾರಣಕ್ಕೂ ನಮ್ಮ ಎರಡನೇ ಅಭ್ಯರ್ಥಿಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸಿದ್ದು ಈ ನಿರ್ಧಾರದಿಂದಾಗಿ ಜೆಡಿಎಸ್​ ಕನಸು ಭಗ್ನ ವಾಗಲಿದೆ, ಸಿದ್ದರಾಮಯ್ಯರ ಒತ್ತಾಸೆಯ ಮೇರೆಗೆ ಕಾಂಗ್ರೆಸ್​ ರಾಜ್ಯಸಭೆ ಚುನಾವಣೆಗೆ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್​ರನ್ನ ಇಳಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್​ ನಾಯಕರು​ ಕಾಂಗ್ರೆಸ್​ನ ಎರಡನೇ ಅಭ್ಯರ್ಥಿಯ ನಾಮಪತ್ರವನ್ನು ವಾಪಸ್ ಪಡೆದು, ನಮಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದರು.

ಇದನ್ನು ಓದಿ – ಮಂಡ್ಯದ ವಿಕಲಾಂಗನ ಸಮಸ್ಯೆಗೆ ಎರಡೇ ದಿನಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ

ಆದರೆ ಇದಕ್ಕೆ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಸೊಪ್ಪು ಹಾಕಿಲ್ಲ. ನನ್ನ ಕೇಳಿ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ ಎಂದು ಖಡಕ್ ಆಗಿ ಹೇಳಿರುವ ಸಿದ್ದರಾಮಯ್ಯ, ಹೈಕಮಾಂಡ್ ನಾಯಕರೇ 2ನೇ ಅಭ್ಯರ್ಥಿ ಹಾಕಿ ಎಂದಿದ್ದಾರೆ. ನಾವು ಗೆಲ್ತೇವೆ ಎಂದು 2ನೇ ಅಭ್ಯರ್ಥಿ ಹಾಕಿದ್ದೇವೆ. ಜೆಡಿಎಸ್​ನವರು ನನ್ನ ಕೇಳಿ ಅಭ್ಯರ್ಥಿ ಹಾಕಿದ್ದಾರಾ? ಬೇರೆಯವರು ಆತ್ಮ ಸಾಕ್ಷಿಯಿಂದ ಮತ ಹಾಕ್ತಾರೆ. ಬೇರೆಯವರು ಯಾರೆಂದು ನಾನು ಹೇಳಲ್ಲ. ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Share This Article
Leave a comment