ಬಿಗ್ ಬಾಸ್ ಖ್ಯಾತಿ ಸೋನುಗೌಡ ಬಂಧನ

Team Newsnap
1 Min Read
  • ಬಾಲಕಿಯನ್ನು ಕರೆ ತಂದು ತನ್ನ ಜೊತೆ ಇಟ್ಟುಕೊಂಡ ಸೋನುಗೌಡ
  • ದತ್ತು ತೆಗೆದುಕೊಂಡ ನಂತರ ಗೌಪ್ಯತೆ ಕಾಪಾಡದೇ ಕಾನೂನು ಉಲ್ಲಂಘಿಸಿರುವ ಆರೋಪ
  • ಬಾಲಕಿಯ ತಂದೆ ತಾಯಿಗೂ ನೊಟೀಸ್ ನೀಡಿರುವ ಪೊಲೀಸರು

ಬೆಂಗಳೂರು : 8 ವರ್ಷದ ಬಾಲಕಿಯನ್ನು ದತ್ತು ತೆಗೆದುಕೊಳ್ಳುವಲ್ಲಿ ಕಾನೂನು ಉಲ್ಲಂಘಿಸಿರುವ ಆರೋಪ ಹಿನ್ನೆಲೆಯಲ್ಲಿ ಸೋಶಿಯಲ್​ ಮೀಡಿಯಾ ಸ್ಟಾರ್ ಸೋನುಗೌಡ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿದೆ.

ರಾಯಚೂರು ಮೂಲದ 8 ವರ್ಷದ ಬಾಲಕಿಯನ್ನು ಸೋಶಿಯಲ್​ ಮೀಡಿಯಾ ಸ್ಟಾರ್ ಸೋನುಗೌಡ ದತ್ತು ಪಡೆದುಕೊಂಡು ಮಗುವನ್ನು ಕರೆ ತಂದು ತನ್ನ ಜೊತೆ ಇಟ್ಟುಕೊಂಡಿದ್ದರು.

ಈ ವೇಳೆ ಗೌಪ್ಯತೆ ಕಾಪಾಡಬೇಕಾದ ಸೋನು ಗೌಡ ಕಾನೂನು ಉಲ್ಲಂಘಿಸಿರುವ ಆರೋಪ ಎದುರಾಗಿದೆ ಸೋನುಗೌಡ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ಅಲ್ಲದೇ ಮಗುವಿನ ತಂದೆ ತಾಯಿಗೂ ಪೊಲೀಸರು ನೊಟೀಸ್ ನೀಡಿದ್ದಾರೆ.

Share This Article
Leave a comment