ಕೆರೂರು ಗುಂಪು ಘರ್ಷಣೆ : ಸಿದ್ದು ನಮ್ಮನ್ನು ನೋಡಲು ಬರುವುದು ಬೇಡ – ಗಾಯಾಳುಗಳ ಪ್ರತಿರೋಧ

Team Newsnap
1 Min Read

ಕೆರೂರು ಗುಂಪು ಘರ್ಷಣೆಯಲ್ಲಿ ನೊಂದ ಮುಸ್ಲಿಂ ಮಹಿಳೆಗೆ 2 ಲಕ್ಷ ರು ಕೊಡಲು ಹೋದ ಸಿದ್ದುಗೆ ಮುಖಭಂಗವಾದರೆ ಈಗ ಮತ್ತೊಂದು ವಿರೋಧ ಎದುರಾಗಿದೆ ಘರ್ಷಣೆ ವೇಳೆ ಗಾಯಗೊಂಡ ಹಿಂದೂ ಸಂಘಟನೆಯ ಗಾಯಾಳುಗಳು ಸಿದ್ದರಾಮಯ್ಯ ಭೇಟಿಯನ್ನು ನಿರಾಕರಿಸಿದ್ದಾರೆ.

ಘರ್ಷಣೆಯಲ್ಲಿ ಗಾಯಗೊಂಡ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಲು ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಲು ಮುಂದಾಗಿದ್ದರು. ಸಿದ್ದು ಕೊಟ್ಟ 2 ಲಕ್ಷ ಪರಿಹಾರದ ಹಣವನ್ನು ಅವರ ಮೇಲೆಯೇ ಎಸೆದ ಮುಸ್ಲಿಂ ಮಹಿಳೆ!

ಸಿದ್ದರಾಮಯ್ಯ ನಮ್ಮ ಭೇಟಿಗೆ ಬರುತ್ತಿದ್ದಾರೆ ಎಂಬ ವಿಚಾರ ತಿಳಿದ ಹಿಂದೂ ಸಂಘಟನೆಯ ಗಾಯಾಳುಗಳು ನಮ್ಮನ್ನು ನೋಡಲು ಸಿದ್ದರಾಮಯ್ಯ ಬರುವುದು ಬೇಡ ಎಂದು ಬಾಗಲಕೋಟೆ ಎಸ್‌ಪಿಗೆ ಫೋನ್ ಮಾಡಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಭೇಟಿಯನ್ನು ಸಿದ್ದರಾಮಯ್ಯ ರದ್ದು ಮಾಡಿದ್ದರು ಇದನ್ನು ಓದಿ –ಪಡಿತರ ಚೀಟಿದಾರರಿಗೆ ಶೀಘ್ರವೇ ರಾಗಿ, ಜೋಳ ವಿತರಣೆ ಸ್ಥಗಿತ 

WhatsApp Image 2022 07 15 at 2.12.14 PM

ಜುಲೈ 6 ರಂದು ಕೆರೂರು ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ, ಚಾಕು ಇರಿತ ನಡೆದಿತ್ತು. ಚಾಕು ಇರಿತದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರ ಗಾಯಗೊಂಡಿದ್ದರು.

ಘರ್ಷಣೆ ಬಳಿಕ ಮನೆಯ ಮೇಲೆ ದಾಳಿ ಹಾಗೂ ಜುಲೈ 8 ರಂದು ಡಾಬಾ ಮೇಲೆ ದಾಳಿ ನಡೆದು ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಘಟನೆಯಲ್ಲಿ ಐವರು ಮುಸ್ಲಿಮರು ಗಾಯಗೊಂಡಿದ್ದರು. ಇಂದು ಎರಡು ಗುಂಪಿನ ಗಾಯಾಳುಗಳ ಭೇಟಿಗೆ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಮುಂದಾಗಿದ್ದರು.

Share This Article
Leave a comment