ಶನಿ ಅಮಾವಾಸ್ಯೆ ದಿನವೇ ವರ್ಷದ ಮೊದಲ ಸೂರ್ಯಗ್ರಹಣ – ಒಳಿತಿಗಿಂತ ಕೆಡುಕೆ ಹೆಚ್ಚು

Team Newsnap
1 Min Read

ವರ್ಷದ ಮೊದಲ ರಾಹುಗ್ರಸ್ತ ಸೂರ್ಯಗ್ರಹಣ ನಾಳೆ (ಏಪ್ರಿಲ್ 30 ರಂದು ) ಸಂಭವಿಸಲಿದೆ.

ಭಾರತೀಯ ಕಾಲಮಾನದ ಪ್ರಕಾರ ಏಪ್ರಿಲ್ 30 ರಂದು ಶನಿವಾರ ಮಧ್ಯರಾತ್ರಿ 12.15ಕ್ಕೆ ಆರಂಭವಾಗುವ ಗ್ರಹಣ, ಬೆಳಗಿನ ಜಾವ 4 ಗಂಟೆ 7 ನಿಮಿಷಕ್ಕೆ ಅಂತ್ಯವಾಗಲಿದೆ.

ಭಾಗಶಃ ಸೂರ್ಯಗ್ರಹಣದ ಸಂಧರ್ಭದಲ್ಲಿ ಶನಿ ಅಮಾವಾಸ್ಯೆ ಇರುವುದರಿಂದ ಕೆಲ ಶನಿದೇಗುಲ ಸೇರಿದಂತೆ ಶಿವ ದೇಗುಲದಲ್ಲಿಯೂ ವಿಶೇಷ ಪೂಜೆಗಳು ನಡೆಯಲಿದೆ.

shani

ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸದೆ ಇದ್ದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣವೂ ಪ್ರಕೃತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

ಸೂರ್ಯಗ್ರಹಣದ ದಿನವೇ, ಶನಿ ಅಮಾವಾಸ್ಯೆ ಕೂಡ ಬಂದಿರೋದು ಇನ್ನೊಂದು ಕಾಕತಾಳೀಯ.

ಏಪ್ರಿಲ್ 30ರಂದು ನಭೋಮಂಡಲದಲ್ಲಿ ಸೂರ್ಯನ ಮೇಲೆ ಗ್ರಹಣದ ಕಾರ್ಮೋಡ ಇರಲಿದೆ. ಆದ್ರೆ ಭಾರತದಲ್ಲಿ ನಭೋಮಂಡಲದ ಈ ವಿಸ್ಮಯ ಗೋಚರಿಸಲ್ಲ. ಚಿಲಿ, ಅರ್ಜೆಂಟೀನಾ, ಉರುಗ್ವೆ, ಆಗ್ನೇಯಾ ಪೆರು, ದಕ್ಷಿಣ ಹಾಗೂ ಪಶ್ಚಿಮ ಅಮೆರಿಕದಲ್ಲಿ ಗೋಚರಿಸಲಿದೆ.

ಈ ಗ್ರಹಣವನ್ನು ಸೂತಕ ಎಂದೇ ಹಿಂದೂ ಧರ್ಮದಲ್ಲಿ ಪರಿಗಣಿಸಲಾಗುತ್ತೆ. ಸೂರ್ಯನಿಗೆ ಅಥವಾ ಚಂದ್ರನಿಗೆ ಗ್ರಹಣ ಬಂದ್ರೆ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಮಾತ್ರವಲ್ಲದೇ ಪ್ರಕೃತಿಗೂ ಹಾನಿ, ಭೂಮಿಯ ಮೇಲೆ ಗ್ರಹಣದ ಕರಿಛಾಯೆ ಬೀಳಲಿದೆ ಎನ್ನುವ ಪ್ರತೀತಿ ಇದೆ. ಈ ಬಾರಿಯ ಸೂರ್ಯಗ್ರಹಣ ಹೆಚ್ಚು ಪ್ರಭಾವಶಾಲಿಯಾಗಿದೆ ಅಂತೆ.

Share This Article
Leave a comment