ಮೈಸೂರು – ಮೈಸೂರು (Mysuru) ದಸರಾ 2023 ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಈಗಾಗಲೇ ಸಿಎಂ ಸಿದ್ದು ಹೇಳಿದ್ದಾರೆ.
ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಯ ಆಯ್ಕೆ ಪಟ್ಟಿ ಸಿದ್ಧವಾಗಿದ್ದು, ಮೈಸೂರಿನ ಅರಣ್ಯಭವನದಲ್ಲಿ ದಸರಾ ಆನೆಗಳ ಆಯ್ಕೆ ಕುರಿತು ಆ. 8ರಂದು ಅಂತಿಮ ಸಭೆ ನಡೆಯಲಿದೆ. ಸಭೆಯಲ್ಲಿ ಸಕ್ರೇಬೈಲು ಆನೆ ಬಿಡಾರದಿಂದ ಒಂದು ಅಥವಾ ಎರಡು ಆನೆಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಮೈಸೂರಿನ ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್, ಜಿಲ್ಲೆಯ ಡಿಸಿಎಫ್, ಎಸಿಎಫ್, ಆರ್‌ಎಫ್‌ಒ ಹಲವರ ತಂಡ ಸಕ್ರೆಬೈಲುನಲ್ಲಿ ಆನೆಗಳ ಆರೋಗ್ಯ ತಪಾಸಣೆ ನಡೆಸಿದರು. ಮಂಡ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ – ಚಲುವರಾಯಸ್ವಾಮಿ
ದಶಕಗಳ ಹಿಂದೆ ಸಕ್ರೆಬೈಲಿನಿಂದ ಮೈಸೂರು ದಸರಾಗೆ ಆನೆಗಳನ್ನು ಕಳುಹಿಸಲಾಗುತ್ತಿತ್ತು. ಈ ಬಾರಿಯೂ ಒಂದೆರಡು ಆನೆ ಪಾಲ್ಗೊಳ್ಳುವ ಸಾಧ್ಯತೆ ಇದೆ’ ಎಂದು ತಿಳಿಸಿದರು. ಸಕ್ರೆಬೈಲು ಆನೆ ಶಿಬಿರದಲ್ಲಿ 20 ಸಾಕಾನೆಗಳಿವೆ.
ಹಿಂದಿನ ವರ್ಷ ದಸರಾಗೆ ಬಂದಿದ್ದ ಗೋಪಾಲಸ್ವಾಮಿ ಆನೆ ಮೃತಪಟ್ಟಿದೆ. ಆ ಆನೆ ಬದಲಿಗೆ ಹೊಸ ಆನೆ ಬರಲಿದೆ. ಇದಲ್ಲದೇ ದುರ್ಗಾಪರಮೇಶ್ವರಿ, ಬಲರಾಮ ಆನೆಗಳೂ ಈ ವರ್ಷದಲ್ಲೇ ಮೃತಪಟ್ಟಿವೆ. ಹಿಂದಿನ ಬಾರಿ ಬಂದಿದ್ದ ಲಕ್ಷ್ಮಿ ಆನೆ ಮರಿ ಹಾಕಿದೆ. ಇದರಿಂದ ಭೀಮ, ಮಹೇಂದ್ರ ಸೇರಿದಂತೆ ಹಿಂದಿನ ವರ್ಷ ತಂದಿದ್ದ ಆನೆಗಳನ್ನೂ ತರಲಾಗುತ್ತಿದೆ. ಇದರೊಟ್ಟಿಗೆ ಇನ್ನೂ ಮೂರ್ನಾಲ್ಕು ಹೊಸ ಆನೆಗಳ ಪಟ್ಟಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
Mysuru
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ