ಸ್ಪಂದನಾ ಪಾರ್ಥೀವ ಶರೀರ ನಾಳೆ ಸಂಜೆ 7 ಗಂಟೆಗೆ ಬೆಂಗಳೂರಿಗೆ ರವಾನೆ

Team Newsnap
1 Min Read

ಬೆಂಗಳೂರು: ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಇಂದು ವಿಧಿವಶರಾಗಿದ್ದರು. ಅವರ ಪಾರ್ಥೀವ ಶರೀರವನ್ನು ನಾಳೆ ಸಂಜೆ 7 ಗಂಟೆಗೆ ಥೈಲ್ಯಾಂಡ್ ನಿಂದ ವಿಮಾನದಲ್ಲಿ ಬೆಂಗಳೂರಿಗೆ ರವಾನಿಸಲಾಗುತ್ತಿದೆ.

ಭಾರತಕ್ಕೆ ಮೃತದೇಹ ತರಲು ಥೈಲ್ಯಾಂಡ್ ರಾಯಭಾರಿ ಕಚೇರಿಯಿಂದ ಅನುಮತಿ ಪತ್ರ ಬಾಕಿಯಿದೆ ಎನ್ನಲಾಗುತ್ತಿದೆ. ಈ ಪ್ರಕ್ರಿಯೆ ಮುಗಿದ ಬಳಿಕ, ನಾಳೆ ಸಂಜೆ 7 ಗಂಟೆಗೆ ವಿಶೇಷ ವಿಮಾನದಲ್ಲಿ ಥೈಲ್ಯಾಂಡ್ ನಿಂದ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಮೃತದೇಹ ಬೆಂಗಳೂರಿಗೆ ರವಾನೆಯಾಗಲಿದೆ. ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ನಿಧನ.

image

ನಾಳೆ 7 ಸಂಜೆ ಥೈಲ್ಯಾಂಡ್ ನಿಂದ ವಿಶೇಷ ವಿಮಾನದಲ್ಲಿ ಆಗಮಿಸುವಂತ ಪಾರ್ಥೀವ ಶರೀರವು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ ಪೋರ್ಟ್ ಅನ್ನು ಬುಧವಾರ ಮಧ್ಯರಾತ್ರಿ 1 ಗಂಟೆಗೆ ತಲುಪುವ ಸಾಧ್ಯತೆ ಇದೆ. ಈ ಬಳಿಕ ಕುಟುಂಬಸ್ಥರ ನಿರ್ಧಾರದ ನಂತರ ಸ್ಪಂದನಾ ಪಾರ್ಥೀವ ಶರೀರದ ಅಂತ್ಯಕ್ರಿಯೆ ಬುಧವಾರದಂದೇ ನೆರೆವೇರಲಿದೆ ಎನ್ನಲಾಗುತ್ತಿದೆ.

ಪಾರ್ಥೀವ ಶರೀರ ನಾಳೆ ಸಂಜೆ 7 ಗಂಟೆಗೆ ಬೆಂಗಳೂರಿಗೆ ರವಾನೆ – Spandana’s mortal remains will be sent to Bangalore at 7 pm tomorrow #sandalwood #karnataka #vijay #death #bodymortal #india #mysore #mandya #bangalore

Share This Article
Leave a comment