ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಮ್ಮ ನಾಲ್ವರು ಆಪ್ತರ ಜೊತೆ ಕಳೆದ ರಾತ್ರಿ ಬೆಂಗಳೂರಿನಿಂದ ಮಲೇಷ್ಯಾಯಕ್ಕೆ ತೆರಳಿದ್ದಾರೆ.
ಕುಟುಂಬ ಸಮೇತ ಯುರೋಪ್ ಪ್ರವಾಸಕ್ಕೆ ಹೋಗಿ ಮರಳಿದ್ದ ಕುಮಾರಸ್ವಾಮಿ ಇದೀಗ ಮಲೇಷ್ಯಾ ಪ್ರವಾಸ ಕೈಗೊಂಡಿದ್ದಾರೆ.
ಕುಮಾರಸ್ವಾಮಿಯ ಜೊತೆ ಮಾಜಿ ಶಾಸಕ ಸಾ ರಾ ಮಹೇಶ್, ಎಂ ಮಂಜುನಾಥ್, ಪರಿಷತ್ ಸದಸ್ಯ ಬೋಜೇಗೌಡ, ಮಾಜಿ ಪರಿಷತ್ ಸದಸ್ಯ ರಮೇಶ್ ಗೌಡ ಸಾಥ್ ನೀಡಿದ್ದಾರೆ.

ನಿನ್ನೆ ರಾತ್ರಿ ಮಾಜಿ ಸಿಎಂ ಕುಮಾರಸ್ವಾಮಿ 12 ಗಂಟೆಗೆ ವಿಮಾನದಲ್ಲಿ ತೆರಳಿದ್ದಾರೆ. ಇನ್ನು ಜೆಡಿಎಸ್ ನಾಯಕರ ಜೊತೆಗೆ ಯಾವುದೇ ಬಿಜೆಪಿ ಪಕ್ಷದ ನಾಯಕರು ಹೋಗಿಲ್ಲ ಎಂದು ತಿಳಿದುಬಂದಿದೆ.ಮೈಸೂರು ದಸರಾಕ್ಕೆ ಸಕ್ರೆಬೈಲಿನ ಆನೆಗಳ ಆಯ್ಕೆ ? | Mysuru Dasara
ಹೆಚ್ ಡಿ ಕುಮಾರಸ್ವಾಮಿಯ ಈ ಮಲೇಷ್ಯಾ ಪ್ರವಾಸ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.