ಮಹಾರಾಷ್ಟ್ರದಲ್ಲಿ ವತ್ ಪೂರ್ಣಿಮಾ ಆಚರಣೆ : ಈ ಜನ್ಮಕ್ಕೆ ಸಾಕು ಮುಂದಿನ ಜನ್ಮಕ್ಕೆ ಬೇರೆ ಪತ್ನಿ ಕರುಣಿಸು ದೇವರೆ

Team Newsnap
1 Min Read
Ritual in Maharashtra: prayer for another wife

ಮಹಾರಾಷ್ಟ್ರದಲ್ಲಿ ವತ್ ಪೂರ್ಣಿಮಾ ಆಚರಣೆ ನಡೆಯಲಿದೆ. ಆ ವೇಳೆ ಮಹಿಳೆಯರು ಆಲದ ಮರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮುಂದಿನ ಏಳೇಳು ಜನ್ಮಕ್ಕೂ ಇದೇ ಗಂಡನನ್ನು ಕರುಣಿಸು, ಸಂತೋಷದ ದಾಂಪತ್ಯ ಕೊಡು ಎಂದು ಬೇಡಿಕೊಳ್ಳುತ್ತಾರೆ.

ಆದರೆ ಇಲ್ಲಿ ವಿಶೇಷವಾಗಿ ಪುರುಷರು ಅರಳಿ ಮರಕ್ಕೆ ಸುತ್ತು ಹಾಕಿ ದೇವರೆ ಕೈಮುಗಿದು ಬೇಡುತ್ತೇನೆ, ಮುಂದಿನ ಜನ್ಮದಲ್ಲಿ ಇದೇ ಪತ್ನಿಯನ್ನು ಜೊತೆ ಮಾಡಬೇಡ, ಬದಲಿ ಕೊಡು ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನು ಓದಿ –ರಥ ಉರುಳಿಬಿದ್ದು ಇಬ್ಬರು ಸಾವು, ಮೂವರ ಸ್ಥಿತಿ ಗಂಭೀರ : ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ : ತಮಿಳುನಾಡು ಸಿಎಂ

ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತ ಪುರುಷರು ಕೆಲ ವರ್ಷಗಳ ಹಿಂದೆಯೇ ಪತ್ನಿ ಪೀಡಕರ ಸಂಘ ರಚಿಸಿಕೊಂಡಿದ್ದಾರೆ. ವತ್ ಪೂರ್ಣಿಮಾ ವೇಳೆ ಮಹಿಳೆಯರು ಪೂಜೆ ಸಲ್ಲಿಸುವುದಕ್ಕೂ ಮುನ್ನಾ ದಿನ ಪುರುಷರು ಅರಳಿಮರಕ್ಕೆ ಪೂಜೆ ಸಲ್ಲಿಸಿದ್ದಾರೆ. ದಯವಿಟ್ಟು ಮುಂದಿನ ಜನ್ಮದಲ್ಲಿ ಈಕೆಯನ್ನೇ ಹೆಂಡತಿಯಾಗಿ ನೀಡಬೇಡ ಎಂದು ದೇವರನ್ನು ಪ್ರಾರ್ಥಿಸಿದ್ದು, 108 ಪ್ರದಕ್ಷಿಣೆ ಹಾಕಿದ್ದಾರೆ.

 ಪತ್ನಿ ಪೀಡಕರ ಆಶ್ರಮದ ಸಂಸ್ಥಾಪಕ ಅಧ್ಯಕ್ಷ ಭರತ್ ಫುಲಾರೆ, ಬಹಳಷ್ಟು ಪುರುಷರು ಮನೆಯಲ್ಲಿ ಹೆದರಿಸುವ ಸಮಸ್ಯೆಗಳು ಭಿನ್ನವಾಗಿರುತ್ತವೆ. ಎಲ್ಲಾ ಕಾನೂನುಗಳು ಮಹಿಳೆಯರ ಸಬಲೀಕರಣಕ್ಕೆ ಕುಮ್ಮಕ್ಕು ನೀಡುತ್ತವೆ. ಈ ತಾರತಮ್ಯದ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ವತ್ ಪೂರ್ಣಿಮಾ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ನಾವು ನಮ್ಮ ಬೇಡಿಕೆಯನ್ನು ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

Share This Article
Leave a comment