ರಥ ಉರುಳಿಬಿದ್ದು ಇಬ್ಬರು ಸಾವು, ಮೂವರ ಸ್ಥಿತಿ ಗಂಭೀರ : ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ : ತಮಿಳುನಾಡು ಸಿಎಂ

Team Newsnap
1 Min Read
Death toll rises to two, three in serious condition: Rs.5lakh Solution: Tamil Nadu CM

ಕಾಳಿಯಮ್ಮ ರಥೋತ್ಸವದ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಮಿಳುನಾಡು ಗಡಿಭಾಗದ ಮಾದೇನಹಳ್ಳಿಯಲ್ಲಿ ನಡೆದಿದೆ.

ಇದನ್ನು ಓದಿ –ಇಸ್ಕಾನ್‌ನ ರಾಜಾಧಿರಾಜ ಗೋವಿಂದ ದೇವಾಲಯ – ರಾಷ್ಟ್ರಪತಿ ಕೋವಿಂದ್ ಉದ್ಘಾಟನೆ

ಮೃತ ದುರ್ದೈವಿಯನ್ನು ಸಿ.ಮನೋಹರನ್ (57) ಮತ್ತು ಜಿ. ಸರವಣನ್ (50) ಎಂದು ಗುರುತಿಸಲಾಗಿದೆ. ವೈಕಾಶಿ ಹಬ್ಬದ ಅಂಗವಾಗಿ ಕಾಳಿಯಮ್ಮನ ದೇವಸ್ಥಾನದ 30 ಅಡಿ ಅಲಂಕೃತ ರಥವನ್ನು ದೇವಾಲಯದ ಸುತ್ತಮುತ್ತಲಿನ ಪ್ರಮುಖ ಬೀದಿಗಳಲ್ಲಿ ಎಳೆಯುವ ವೇಳೆ ಈ ಘಟನೆ ಸಂಭವಿಸಿದೆ.

ರಥ ಕೆಳಗುರುಳಿ ಬಿದ್ದಾಗ ರಥದ ಚಕ್ರದಡಿ ಸಿಲುಕಿದ ಇಬ್ಬರನ್ನು ರಕ್ಷಿಸಲು ಮೆರವಣಿಗೆ ವೀಕ್ಷಿಸುತ್ತಿದ್ದವರು ತಕ್ಷಣ ಧಾವಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಥವನ್ನು ಎಳೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ರಥದ ಚಕ್ರವು ಕೆಳಗುರುಳಿ ಬಿದ್ದಿದ್ದು, ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಘಟನೆಯಲ್ಲಿ ಗಾಯಗೊಂಡ ಮೂವರನ್ನು ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದೀಗ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಘಟನೆಯಲ್ಲಿ ಸಾವನ್ನಪ್ಪಿರುವವವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಈ ಜಾತ್ರೆಯಲ್ಲಿ ಸುಮಾರು 18 ಹಳ್ಳಿಯ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪಾಪರಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Share This Article
Leave a comment