ಇಸ್ಕಾನ್‌ನ ರಾಜಾಧಿರಾಜ ಗೋವಿಂದ ದೇವಾಲಯ – ರಾಷ್ಟ್ರಪತಿ ಕೋವಿಂದ್ ಉದ್ಘಾಟನೆ

Team Newsnap
1 Min Read

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಸ್ಕಾನ್‌ನ ನೂತನ ರಾಜಾಧಿರಾಜ ಗೋವಿಂದ ದೇವಾಲಯ ಹಾಗೂ ಸಾಂಸ್ಕೃತಿಕ ಸಂಕೀರ್ಣ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿದರು. ಕನಕಪುರ ರಸ್ತೆಯ ವಸಂತಪುರದ ವಿಶಾಲ‌ ಜಾಗದಲ್ಲಿ ಈ ನೂತನ ದೇವಾಲಯ ನಿರ್ಮಿಸಲಾಗಿದೆ.

WhatsApp Image 2022 06 14 at 12.41.02 PM
ISKCON’s Govind Temple – Opening ceremony by President Kovind

ಇದನ್ನು ಓದಿ -ಕಡಿಮೆ ಅಂಕ ಗಳಿಸಿದ ಮಕ್ಕಳು ಖಿನ್ನರಾಗಬೇಕಿಲ್ಲ – ಐಎಎಸ್‌ ಅಧಿಕಾರಿ ತುಷಾರ್ ಡಿ ಸುಮೇರಾ

ದೇವಾಲಯಕ್ಕೆ ಮಂಗಳವಾರ ಬೆಳಿಗ್ಗೆ ಪ್ರವೇಶಿಸಿದ ರಾಷ್ಟ್ರಪತಿ, ಪತ್ನಿ ಸವಿತಾ ಸಮೇತ ದೇವರ ದರ್ಶನ ಪಡೆದರು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಜೊತೆಗಿದ್ದರು. ದರ್ಶನ ನಂತರ, ದೇವಾಲಯ ಆವರಣದ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಆಗಸ್ಟ್ 1ರ ನಂತರ ಸಾರ್ವಜನಿಕರ‌ ಪ್ರವೇಶಕ್ಕೆ ದೇವಾಲಯ ಮುಕ್ತವಾಗಲಿದೆ’ ಇಸ್ಕಾನ್‌ನ ನೂತನ ರಾಜಾಧಿರಾಜ ಗೋವಿಂದ ದೇವಾಲಯ ತಿರುಮಲ ಮಾದರಿಯಲ್ಲಿ ನಿರ್ಮಿಸಲಾಗಿದೆ. ಮುಂದಿನ 48 ದಿನಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಎಂದು ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧು ಪಂಡಿತ್ ದಾಸ್ ಹೇಳಿದರು. ದೇಶದ ವಿವಿಧ ಭಾಗಗಳ ಭಕ್ತರ ಭಕ್ತಿಯ ಕ್ಷೇತ್ರ ಇದಾಗಲಿದೆ. ನಿತ್ಯವೂ ಉಚಿತ ಊಟ ಇರಲಿದೆ’ ಎಂದೂ ತಿಳಿಸಿದರು‌.

Share This Article
Leave a comment