ಕಡಿಮೆ ಅಂಕ ಗಳಿಸಿದ ಮಕ್ಕಳು ಖಿನ್ನರಾಗಬೇಕಿಲ್ಲ – ಐಎಎಸ್‌ ಅಧಿಕಾರಿ ತುಷಾರ್ ಡಿ ಸುಮೇರಾ

Team Newsnap
1 Min Read
IAS officer Tushar d Sumera says low-scoring children need not be depressed

ಕಡಿಮೆ ಅಂಕ ಗಳಿಸಿದ ಮಕ್ಕಳು ಖಿನ್ನರಾಗಬೇಕಿಲ್ಲ, ಅವಕಾಶಗಳು ಇನ್ನೂ ಮುಗಿದಿಲ್ಲ ಎಂಬ ಸಂದೇಶ ನೀಡಲು ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಲು ಐಎಎಸ್​ ಅಧಿಕಾರಿಯೊಬ್ಬರು 10ನೇ ತರಗತಿಯ ಅಂಕಪಟ್ಟಿಯೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.

ಇದನ್ನು ಓದಿ –ಲೈಟರ್ ವಿಚಾರ– ಮಹಿಳೆ ಜುಟ್ಟು ಎಳೆದಾಡಿ, ಪತಿ ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಪುಂಡರು

ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಗುಜರಾತ್‌ನ ಭರೂಚ್‌ನ ಜಿಲ್ಲಾಧಿಕಾರಿ ತುಷಾರ್ ಡಿ ಸುಮೇರಾ ಅವರು ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಹಂಚಿಕೊಂಡಿದ್ದು, ಅವರು ಇಂಗ್ಲಿಷ್‌ನಲ್ಲಿ 35 ಮತ್ತು ಗಣಿತದಲ್ಲಿ 36 ಅಂಕಗಳನ್ನು ಪಡೆದಿದ್ದಾರೆ.

ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನಕ್ಕಿಂತ ಅಂಕಗಳಿಗೆ ಹೆಚ್ಚಿನ ಮಹತ್ವ ಕೊಡುವುದರಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಏನು ಅರಿಯದ ವಿದ್ಯಾರ್ಥಿಗಳ ಮನಸ್ಸಲ್ಲಿ ಅಂಕಗಳ ತಾರತಮ್ಯ ಮಾನಸಿಕವಾಗಿ ಕುಗ್ಗಿಸಿ ಬಿಡುತ್ತದೆ. ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಪಾಲಕರು ಕೂಡ ಎಡವಿದ್ದಾರೆ.

ಛತ್ತೀಸ್‌ಗಢ ಕೇಡರ್‌ನ 2009 ರ ಬ್ಯಾಚ್ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಅಂಕಪಟ್ಟಿಯೊಂದಿಗೆ ತುಷಾರ್‌ ಅವರ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ತಮ್ಮ ಅಂಕಪಟ್ಟಿ ಹಂಚಿಕೊಂಡ ಭರೂಚ್ ಕಲೆಕ್ಟರ್ ತುಷಾರ್ ಸುಮೇರಾ ಅವರು, 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಕೇವಲ ಪಾಸ್‌ ಮಾರ್ಕ್‌ ಗಳಿಸಿ ಉತ್ತೀರ್ಣರಾಗಿದ್ದಾರೆ ಎಂದು ಹೇಳಿದ್ದಾರೆ. ಅವರು ಇಂಗ್ಲಿಷ್ನಲ್ಲಿ 35 ಮತ್ತು ಗಣಿತದಲ್ಲಿ 36 ಅಂಕ ಮಾತ್ರ ಪಡೆದಿದ್ದಾರೆ” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

2012 ರಲ್ಲಿ ಐಎಎಸ್ ಅಧಿಕಾರಿಯಾದ ತುಷಾರ್ ಸುಮೇರಾ ಅವರು ಆರ್ಟ್ಸ್ ಸ್ಟ್ರೀಮ್‌ನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೊದಲು ಶಾಲಾ ಶಿಕ್ಷಕರಾಗಿಯೂ ಅವರು ಕೆಲಸ ಮಾಡಿದ್ದಾರೆ.

Share This Article
Leave a comment