July 6, 2022

Newsnap Kannada

The World at your finger tips!

WhatsApp Image 2022 06 14 at 2.03.23 PM

Husband arrested for killing wife of cricket bat for dowry

ವರದಕ್ಷಿಣೆಗಾಗಿ ಕ್ರಿಕೆಟ್​ ಬ್ಯಾಟ್​ನಿಂದ ಪತ್ನಿಯನ್ನು ಕೊಂದ – ಹೈಡ್ರಾಮ ಮಾಡಿದ ಪತಿ ಬಂಧನ !

Spread the love

ವರದಕ್ಷಿಣೆಯಾಗಿ ಕಾರು ಕೊಡಲಿಲ್ಲ ಎಂದು ಕ್ರಿಕೆಟ್​ ಬ್ಯಾಟ್​ನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದ ಪತಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ

ಇದನ್ನು ಓದಿ –ಮಹಾರಾಷ್ಟ್ರದಲ್ಲಿ ವತ್ ಪೂರ್ಣಿಮಾ ಆಚರಣೆ : ಈ ಜನ್ಮಕ್ಕೆ ಸಾಕು ಮುಂದಿನ ಜನ್ಮಕ್ಕೆ ಬೇರೆ ಪತ್ನಿ ಕರುಣಿಸು ದೇವರೆ

ಸೇಲಂನ ಮುಲ್ಲೈ ನಗರದ ನಿವಾಸಿ ಧನಶ್ರಿಯಾ (26) ಕೊಲೆಯಾದ ದುರ್ದೈವಿ. ಕೀರ್ತಿರಾಜ್​ (31) ಬಂಧಿತ ಆರೋಪಿ.

3 ವರ್ಷಗಳ ಹಿಂದೆ ಇಬ್ಬರಿಗೆ ಮದುವೆಯಾಗಿತ್ತು. ದಂಪತಿ ಕೆಲ ದಿನಗಳ ಹಿಂದಷ್ಟೇ ಸ್ವಂತ ಮನೆಯಿಂದ ಬಾಡಿಗೆ ಮನೆಗೆ ತೆರಳಿದ್ದರು.

ಆಗಲೇ ಧನಶ್ರಿಯಾಗೆ ಗಂಡನಿಂದ ವರದಕ್ಷಿಣೆ ಕಿರುಕುಳ ಆರಂಭವಾಗಿತ್ತು. ಅತಿ ಹೆಚ್ಚು ಚಿನ್ನಾಭರಣ ಮತ್ತು ಕಾರಿಗಾಗಿ ಕೀರ್ತಿರಾಜ್​ ಬೇಡಿಕೆ ಇಟ್ಟಿದ್ದ.

ಹೆಚ್ಚಿನ ವರದಕ್ಷಿಣೆ ಕೊಡಲು ಆಗುವುದಿಲ್ಲ ಎಂದು ಧನಶ್ರಿಯಾ ಕುಟುಂಬದವರು ಹೇಳಿದ್ದರು. ಈ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಆದರೀಗ ಜಗಳ ತಾರಕಕ್ಕೇರಿ, ನಿಯಂತ್ರಣ ಕಳೆದುಕೊಂಡ ಕೀರ್ತಿರಾಜ್​, ಕ್ರಿಕೆಟ್​ ಬ್ಯಾಟ್​ನಿಂದ ಪತ್ನಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ಕೊಲೆಯಾದ ಬಳಿಕ ಪತ್ನಿಯ ಮೃತದೇಹವನ್ನು ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಪತ್ನಿಯ ಮೃತದೇಹ ನೇತುಹಾಕಿ ತನ್ನ ಅತ್ತೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಸುಳ್ಳು ಹೇಳಿದ್ದಾನೆ. ಆದರೆ, ಧನಶ್ರಿಯಾ ತಲೆ ಮತ್ತು ಮುಖದಲ್ಲಿ ಗಾಯದ ಗುರುತಗಳನ್ನು ನೋಡಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಆರೋಪಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆರೋಪಿ ಸತ್ಯವನ್ನು ಒಪ್ಪಿಕೊಂಡ ಆತನನ್ನು ಬಂಧಿಸಲಾಗಿದೆ.

error: Content is protected !!