ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಪ್ರತಿನಿತ್ಯ ಪೊಲೀಸರ ಗಸ್ತು: ಆರಗ ಜ್ಞಾನೇಂದ್ರ

Team Newsnap
1 Min Read

ಮೈಸೂರು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಪ್ರತಿನಿತ್ಯ ಗಸ್ತುವಾಹನ ಗಳು ಓಡಾಡಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆರಗ
ಶುಕ್ರವಾರದಿಂದಲೇ ಗಸ್ತುವಾಹನಗಳ ಓಡಾಟ ಅಲ್ಲಿ ಆರಂಭವಾಗಿದೆ ಎಂದರು.

ವಿಶೇಷ ಬಂದೋಬಸ್ತ್ ಮಾಡಬೇಕು. ಚಾಮುಂಡಿ ತಪ್ಪಲು ಹಾಗೂ ಸುತ್ತಮುತ್ತಲ ಭಾಗದಲ್ಲಿ ಸಂಜೆ ನಂತರ ಜನರು ಓಡಾಡಲೇ ಬೇಕು ಎಂದಾದರೆ ರಕ್ಷಣೆ ಕೊಡುವ ರೀತಿಯಲ್ಲಿ ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ ಎಂದು ವಿವರಿಸಿದರು.

ಮೈಸೂರಿನಲ್ಲಿ ಇತ್ತೀಚಿಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾದ ಪೊಲೀಸರನ್ನು ಅಭಿನಂದಿಸುವುದಾಗಿ ಆರಗ ಜ್ಞಾನೇಂದ್ರ ಹೇಳಿದರು.

ಇದೊಂದು ಅಮಾನವೀಯ ಕೃತ್ಯ ಮೈಸೂರಿನಲ್ಲಿ ನಡೆದಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು, ಪ್ರವಾಸಿಗರು ಸೇರುವಂತಹ ಸಾಂಸ್ಕೃತಿಕ ನಗರಿ ಮೈಸೂರು. ಈ ಘಟನೆ ನಡೆದ ನಂತರ ಭಾರಿ ಆತಂಕ ಸೃಷ್ಟಿಯಾಗಿತ್ತು. ನಮಗೆ ವಿಶ್ವಾಸವಿತ್ತು ನಮ್ಮ ಪೊಲೀಸರು ಈ ಪ್ರಕರಣವನ್ನು ಭೇದಿಸುತ್ತಾರೆಂದು. ಆದರೂ ಸಾರ್ವಜನಿಕರಲ್ಲಿ ಇದ್ದ ಅತಂಕಕ್ಕೆ ಇಂದು ತೆರೆಬಿದಿದ್ದೆ ಎಂದರು.

ನನಗೆ ಅತ್ಯಂತ ಸಂತೋಷವಾಗಿದೆ. ಈ ನೀಚ ಕೃತ್ಯ ಮಾಡುವವರಿಗೆ ನಮ್ಮ ಪೊಲೀಸರು ಒಂದು ಸಂದೇಶ ಕೊಟ್ಟಿದ್ದಾರೆ. ಈಗಾಗಲೇ ಡಿಜಿಯವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ ತಂಡಗಳಿಗೆ ಐದು ಲಕ್ಷರೂ. ಬಹುಮಾನ ಘೋಷಿಸಿದ್ದಾರೆ ಎಂದರು.‌

Share This Article
Leave a comment