ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ- ಐವರ ಬಂಧನ

Team Newsnap
1 Min Read
Voting for state assembly tomorrow: 1.56 lakh police personnel in charge ನಾಳೆ ರಾಜ್ಯ ವಿಧಾನಸಭೆಗೆ ಮತದಾನ : 1.56 ಲಕ್ಷ ಪೊಲೀಸ್ ಸಿಬ್ಬಂದಿಗಳ ಉಸ್ತುವಾರಿ

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿಯ ಗುಡ್ಡದಲ್ಲಿ ಆ.೨೪ರ ಸಂಜೆ ನಡೆದ ಸಾಮಾಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ತಿರ್ಪೂರಿನ ಐವರನ್ನು ಬಂಧಿಸಲಾಗಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ತಿಳಿಸಿ, ಒಬ್ಬ ಆರೋಪಿ ತಲೆಮರೆಸಿ ಕೊಂಡಿದ್ದಾನೆ. ಅವನ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಇವರಲ್ಲಿ ಒಬ್ಬ ಬಾಲಾಪರಾಧಿಯೂ ಇದ್ದಾನೆ ಎಂದು ಹೇಳಿದರು.

ಕ್ಷಿಪ್ರ ಹಾಗೂ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ ರಾಜ್ಯ ಸರ್ಕಾರ ಐದು ಲಕ್ಷರೂ. ಬಹುಮಾನ ಘೋಷಿಸಲಾಗಿದೆ ಎಂದರು.

ಅತ್ಯಾಚಾರ ಆರೋಪಿಗಳು ಯಾರು?

ಆರೋಪಿಗಳಲ್ಲಿ ಕೂಲಿ ಕಾರ್ಮಿಕ, ಚಾಲಕ, ಕಾರ್ಪೆಂಟರಿ ಕೆಲಸ ಮಾಡುವವರು ಇದ್ದಾರೆ. ಇವರು ೭ ಹಾಗೂ ೮ನೇ ತರಗತಿ ಓದಿದವರು ಇದ್ದಾರೆ. ಕೆಲವು ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ ಇದೆ ಎಂದರು.

ಆಗಸ್ಟ್ ೨೪ರ ಸಂಜೆ 7ರಿಂದ 8 ಗಂಟೆ ಅವಧಿಯಲ್ಲಿ ಈ ದುರ್ಘಟನೆ ನಡೆದಿದೆ. ಆರೋಪಿಗಳು ಆಗಾಗ್ಗೆ ಕೆಲಸಕ್ಕೆ ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆಗೆ ವಾಹನ ಚಾಲಕರೊಂದಿಗೆ ಬರುತ್ತಿದ್ದರು. ಕೆಲಸ ಮುಗಿಸಿ ಹೋಗುವಾಗ ಕುಡಿಯುತ್ತಾ ಪಾರ್ಟಿ ಮಾಡುತ್ತಿದ್ದರು. ನಂತರ ತಮ್ಮೂರಿಗೆ ಹೋಗುತ್ತಿದ್ದರು. ದುಷ್ಕೃತ್ಯ ನಡೆಸಿದ ಆರೋಪಿಗಳು ಮೂರು ಲಕ್ಷರೂಗೆ ಒತ್ತಾಯಿಸಿದ್ದರು. ಹಣ ನೀಡದಿದ್ದಾಗ ಅತ್ಯಾಚಾರ ನಡೆಸಿದ್ದಾರೆ. ಯುವತಿಯನ್ನು ಬ್ಲಾಕ್ ಮೇಲೆ ಮಾಡಿರುವ ಮಾಹಿತಿ ಇಲ್ಲ ಎಂದರು.

Share This Article
Leave a comment