ಕರ್ನಾಟಕಕ್ಕೆ ಮತ್ತೆ ಬರೆ : ತ. ನಾಡಿಗೆ 15 ದಿನ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡಿ – CWRC ಸೂಚನೆ

Team Newsnap
1 Min Read

ನವದೆಹಲಿ : ತಮಿಳುನಾಡಿಗೆ ಮತ್ತೆ ನಿತ್ಯ 15 ದಿನಗಳ ಕಾಲ 3 ಸಾವಿರ ಕ್ಯೂಸಕ್ ನೀರು ಹರಿಸಲು ಸಿ ಡಬ್ಲ್ಯೂ ಆರ್ ಸಿ ಕರ್ನಾಟಕಕ್ಕೆ ಸೂಚಿಸಿದೆ.

ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ , 15 ದಿನಗಳ ಕಾಲವೂ ನಿತ್ಯ 13 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ತಮಿಳುನಾಡು ಬೇಡಿಕೆ ಇಟ್ಟಿತ್ತು.

ಅದರೆ CWRC ಕರ್ನಾಟಕಕ್ಕೆ 15 ದಿನಗಳ ಕಾಲ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿದೆ.

ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಅಧಿಕಾರಿಗಳು ಭಾಗಿಯಾಗಿದ್ದರು, ಕೆಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಿದೆ.ಮಳೆಯಾಗುತ್ತಿದ್ದರೂ ಕರ್ನಾಟಕ ಸರಿಯಾಗಿ ನೀರು ಹರಿಸಿಲ್ಲ ಎಂದು ವಾದ ಮಂಡಿಸಿದೆ.

ಸಿಡಬ್ಲ್ಯೂಎಂಎ ಆದೇಶವನ್ನು ಕರ್ನಾಟಕ ಸರಿಯಾಗಿ ಪಾಲಿಸುತ್ತಿಲ್ಲ. ಮಳೆ ಹೆಚ್ಚಾಗಿರುವ ಪ್ರಮಾಣ ಆಧರಿಸಿ ನೀರನ್ನು ಹರಿಸಬೇಕು. ಪ್ರತಿದಿನ 13000 ಕ್ಯೂಸೆಕ್ ನೀರು ಹರಿಸಬೇಕು ಎಂದು ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ತಮಿಳುನಾಡು ಅಧಿಕಾರಿಗಳ ವಾದ ಮಂಡಿಸಿದ್ದಾರೆ.ಮಹಿಷ ದಸರಾ ಬೆಂಬಲಿಸಿ ಅ. 13 ರಂದು ಮಂಡ್ಯದಿಂದ ಮೈಸೂರಿಗೆ ಪ್ರಗತಿಪರರ ಬೈಕ್ ಜಾಥಾ : ಲಕ್ಷ್ಮಣ್

ವಾದಗಳನ್ನು ಆಲಿಸಿದ ನಂತರ ಮತ್ತೆ ಸಿಡಬ್ಲ್ಯೂ ಆರ್ ಸಿ ಯು ಕರ್ನಾಟಕಕ್ಕೆ ಪ್ರತಿನಿತ್ಯ ತಮಿಳುನಾಡಿಗೆ 15 ದಿನಗಳವರೆಗೆ 3000 ಕ್ಕೆ ನೀರು ಹರಿಸುವಂತೆ ಸೂಚನೆ ನೀಡಿದೆ ಕರ್ನಾಟಕ್ಕೆ ಮತ್ತೆ ಬರೆ ಹಾಕಿದಂತಾಗಿದೆ.

Share This Article
Leave a comment