SIT ಯಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ

Team Newsnap
1 Min Read

ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ವಿಮಾನ ನಿಲ್ದಾಣದ ಇಮಿಗ್ರೇಷನ್ ಲುಕೌಟ್ ನೋಟಿಸ್ ಸರ್ವ್ ಮಾಡಲಾಗಿದ್ದು , ವಿಮಾನ ನಿಲ್ದಾಣದ ಇಮಿಗ್ರೇಷನ್‍ಗೆ ಎಸ್‍ಐಟಿ ಅಧಿಕಾರಿಗಳು ಲುಕೌಟ್ ನೋಟಿಸ್ ನೀಡಿ ,ಲೊಕೇಟ್ ಆದ ಕೂಡಲೇ ವಶಕ್ಕೆ ಪಡೆಯಲು ಸೂಚನೆ ನೀಡಲಾಗಿದೆ.

ಪ್ರಜ್ವಲ್ ರೇವಣ್ಣ ವಿಶೇಷ ತನಿಖಾ ತಂಡಕ್ಕೆ , ವಿಚಾರಣೆಗೆ ಹಾಜರಾಗಲು 7 ದಿನ ಅವಕಾಶ ನೀಡುವಂತೆ ಕೋರಿ ಮನವಿ ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಜಿ ಅವರು ಎಸ್‍ಐಟಿ ಮುಖ್ಯಸ್ಥರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದು ,ಮೇ 15 ರಂದು ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸ್ಸು ಬರುವ ಬಗ್ಗೆ ಮಾಹಿತಿ ದೊರಕಿದೆ.

ಲುಕ್ ಔಟ್ ನೋಟಿಸ್ ಎಂದರೇನು ?

ತಲೆಮರೆಸಿಕೊಂಡಿರುವ ಅಥವಾ ಕಾನೂನು ಜಾರಿ ಸಂಸ್ಥೆಗಳಿಂದ ಬೇಕಾಗಿರುವ ವ್ಯಕ್ತಿಯು ದೇಶವನ್ನು ತೊರೆಯಲು ಸಾಧ್ಯವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಎಲ್‌ಒಸಿ ನೀಡಲಾಗುತ್ತದೆ.ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ‘ಕಾರ್ತಿಕ್’ ನಾಪತ್ತೆ

ಹೆಚ್ಚಾಗಿ ಇದನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳಲ್ಲಿನ ವಲಸೆ ತಪಾಸಣಾ ಕೇಂದ್ರಗಳಲ್ಲಿ ವಲಸೆ ಶಾಖೆಯು ಬಳಸುತ್ತದೆ.

Share This Article
Leave a comment