ಮಹಿಷ ದಸರಾ ಬೆಂಬಲಿಸಿ ಅ. 13 ರಂದು ಮಂಡ್ಯದಿಂದ ಮೈಸೂರಿಗೆ ಪ್ರಗತಿಪರರ ಬೈಕ್ ಜಾಥಾ : ಲಕ್ಷ್ಮಣ್

Team Newsnap
2 Min Read

ಮಂಡ್ಯ : ಮೈಸೂರಿನಲ್ಲಿ ನಡೆಯುತ್ತಿರುವ ದೇಶದ ಮೂಲ ನಿವಾಸಿಗಳ ದ್ರಾವಿಡ ನಾಡದೊರೆ ಮಹಿಷಾ ದಸರಾಕ್ಕೆ ಜಿಲ್ಲಾ ಸಮಾನ ಮನಸ್ಕರ ವೇದಿಕೆ ಬೆಂಬಲ ಸೂಚಿಸಿದೆ. ಅ13 ರಂದು ಮಂಡ್ಯದಿಂದ ಮೈಸೂರಿಗೆ ಬೈಕ್ ಜಾಥಾದ ಮೂಲಕ ಮಹಿಷಾ ಉತ್ಸವಕ್ಕೆ ತೆರಳುವುದಾಗಿ ವೇದಿಕೆಯ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ ಬುಧವಾರ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಲಕ್ಷ್ಮಣ್ , ದ್ರಾವಿಡ ಸಂಸ್ಕೃತಿಯ ನಾಶದ ಮೂಲಕ ತನ್ನ ವೈಭವವನ್ನು ಗಟ್ಟಿಗೊಳಿಸುವಂತಹ ವೈದಿಕ ಆರ್ಯರ ಪರವಾಗಿ ವಕಾಲತ್ತು ವಹಿಸುವ ಸಂಸದ ಪ್ರತಾಪ ಸಿಂಹ ಚೀರಾಟದ ವಿಚಾರಕ್ಕೆ ಯಾವುದೇ ಆಧಾರಗಳಿಲ್ಲ ಎಂದರು.

ಮೈಸೂರು ಎಂಬ ಪದ ಮಹಿಷ ಶೂರನ ಊರು ಮೈಸೂರಾಗಿದೆ,ಇದರಲ್ಲಿ ಗೊಂದಲಗಳಿಲ್ಲ ಮಹರಾಜರು ಚಾಮುಂಡಿ ಬೆಟ್ಟದಲ್ಲಿ ಮಹಿಷನ ಪ್ರತಿಮೆ ನಿರ್ಮಾಣ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.


ಮೈಸೂರಿನ ದೊಡ್ಡ ಗಡಿಯಾರದ ಶಂಕುಸ್ಥಾಪನೆ ಸಮಯದಲ್ಲಿಮಹರಾಜರು ಶಿಲಾನ್ಯಾಸದಲ್ಲಿ ಬರೆಯಿಸಿ ಸಮರ್ಥನೆ ಒದಗಿಸಿರುವುದು ಅತಿ ದೊಡ್ಡ ಸಾಕ್ಷಿಯಾಗಿರುತ್ತದೆ. ಅಷ್ಟೇ ಅಲ್ಲದೆ ಮಹಿಷನ ಬಗ್ಗೆ ಜಾನಪದ ಹಿನ್ನೆಲೆಯಲ್ಲಿಯೂ ನಾಡು ಮಹಿಷನಿಗೆ ಸೇರಿದ್ದು ಎನ್ನುವ ಸಾಕಷ್ಟು ಚಾರಿತ್ರಿಕ
ಹಿನ್ನೆಲೆಯ ದಾಖಲೆಗಳಿವೆ ಎಂದು ಹೇಳಿದರು.

ಚಾರಿತ್ರಿಕ ಹಿನ್ನೆಲೆ ಗೊತ್ತಿರದ ಸಂಸದ ಪ್ರತಾಪ ಸಿಂಹ ಮಹಿಷ ದಸರಾ ವಿರೋಧ ಮಾಡುವುದಕ್ಕೆ ಯಾವುದೇ ಆಧಾರಗಳಿಲ್ಲ. ಅವರು ಸಾಂವಿಧಾನಿಕ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ಅಸಂವಿಧಾನಿಕ,ಅನಾಗರಿಕವಾಗಿ ವರ್ತಿಸುತ್ತಿರುವುದು ಖಂಡನೀಯ ಎಂದರು.

ಜಾನಪದ, ಚರಿತ್ರೆಯ ಗಂಧಗಾಳಿ ಗೊತ್ತಿಲ್ಲದ,ದ್ರಾವಿಡ ಸಂಸ್ಕೃತಿಯ ಅರಿವು ಇರದ ಪ್ರತಾಪ ಸಿಂಹನಿಗೆ ಛೀಮಾರಿ ಹಾಕಲು ಸದಾ ಸಿದ್ಧರಿದ್ದೇವೆ, ಮಹಿಷನ ವಿರುದ್ಧ ನಡೆಯುವ ಅಪಪ್ರಚಾರಗಳನ್ನು ವಿರೋಧಿಸಿ ನಡೆಯುವ ಉತ್ಸವಗಳಿಗೆ ವೇದಿಕೆ ಬೆಂಬಲಿಸುತ್ತದೆ ಎಂದು ತಿಳಿಸಿದರು.ಮಹಿಷ ದಸರಾಕ್ಕೆ ಮಂಡ್ಯ ಜಿಲ್ಲೆಯಿಂದ ಆಗಮಿಸುವ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಅ. 13 ರ ಬೆಳಿಗ್ಗೆ 7 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗವಿರುವ ಅಂಬೇಡ್ಕರ್ ಪ್ರತಿಮೆ ಬಳಿ ಆಗಮಿಸಬೇಕು ಎಂದು ಮನವಿ ಮಾಡಿದ ಅವರು ಗೌರವ ಸಮರ್ಪಣೆ ನಂತರ ಮೈಸೂರಿಗೆ ಬೈಕ್ ಜಾಥಾ ಹೊರಡಲಾಗುವುದು ಎಂದರು.ನವರಾತ್ರಿಗೂ ಮುನ್ನವೇ ಕಗ್ಗತ್ತಲ ರಾಜ್ಯ: ಎಚ್‍ಡಿಕೆ ಲೇವಡಿ

ಗೋಷ್ಠಿಯಲ್ಲಿ ವೇದಿಕೆಯ ಮುಖಂಡರಾದ ನಾಗರಾಜ್, ದೇವರಾಜ್ ಕೊಪ್ಪ, ದಸಂಸ ಎಂ.ವಿ ಕೃಷ್ಣ,ನರಸಿಂಹಮೂರ್ತಿ, ಆಟೋ ಚಾಲಕರ ಸಂಘದ ಗುರು ಶಂಕರ್, ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿ ಮಹಮ್ಮದ್ ಉಪಸ್ಥಿತರಿದ್ದರು

Share This Article
Leave a comment