ನವರಾತ್ರಿಗೂ ಮುನ್ನವೇ ಕಗ್ಗತ್ತಲ ರಾಜ್ಯ: ಎಚ್‍ಡಿಕೆ ಲೇವಡಿ

Team Newsnap
1 Min Read

ಬೆಂಗಳೂರು: ರಾಜ್ಯ ಸರ್ಕಾರ ನವರಾತ್ರಿಗೂ ಮುನ್ನವೇ ಜನರಿಗೆ 6ನೇ ಗ್ಯಾರಂಟಿ ಕೊಡಲಿದೆ. ಅದು ರಾಜ್ಯಕ್ಕೆ ಕತ್ತಲೆಭಾಗ್ಯ ಆಗಿರಲಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಡಿಸೆಂಬರ್ ಹೊತ್ತಿಗೆ ಕತ್ತಲೆ ಭಾಗ್ಯದ ಕೂಪಕ್ಕೆ ಬೀಳಲಿದೆ. ಅಂದರೆ ಹೊಸ ವರ್ಷಕ್ಕೆ ತಾನು ಕೊಟ್ಟ ಗೃಹಜ್ಯೋತಿಗೆ ಎಳ್ಳುನೀರು ಬಿಟ್ಟು ಕಗ್ಗತ್ತಲ ಕರ್ನಾಟಕದ ಉದಯ ಮಾಡುವುದು ಗ್ಯಾರಂಟಿ.  ಇದು ಸತ್ಯ ಎಂದು ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯದ ವಿರುದ್ಧ ನಿಲುವಳಿ ಸೂಚನೆ ಅಂಗೀಕಾರವಾಗಿದೆ. ಎಮ್ಮೆ ಚರ್ಮದ ರಾಜ್ಯ ಸರ್ಕಾರಕ್ಕೆ ಕಾವೇರಿ ಒಡಲಾಳದ ಬೇಗುದಿ ಬಗ್ಗೆ ಜಾಣ ಕುರುಡು. ಸರಕಾರ ರಾಜ್ಯದ ಉದ್ದಗಲಕ್ಕೂ ಅನಧಿಕೃತ ಲೋಡ್ ಶೆಡ್ಡಿಂಗ್ ಹೇರಿದೆ. ಆದರೆ ತಮಿಳುನಾಡಿಗೆ ಸಮೃದ್ಧ ನೀರು ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಲ, ಪವನ, ಸೌರ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಇದು ದೂರದೃಷ್ಟಿಯ ಕೊರತೆ ಹಾಗೂ ನಿರ್ವಹಣೆಂ ವೈಫಲ್ಯ ಕಾರಣ. ರಾಜ್ಯದ ಒಟ್ಟಾರೆ ಬೇಡಿಕೆಯಲ್ಲಿ ಶೇ.20ರಷ್ಟು ವಿದ್ಯುತ್ತನ್ನು ಸರಕಾರ ಹೊರಗಿನಿಂದಲೇ ಪಡೆಯುತ್ತಿದೆ. ಚಲೋ ಚಾಮುಂಡಿ ಬೆಟ್ಟ : ಮಹಿಷ ದಸರಾಗೆ ಬ್ರೇಕ್ – ಪೊಲೀಸ್‌ ಆಯುಕ್ತ ರಮೇಶ್ ಬಾನೋತ್

ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ವಿದ್ಯುತ್ ಸಾಲಕ್ಕೆ ತಳ್ಳಿ, ಕರುನಾಡನ್ನು ಬರ್ಬಾದ್ ಮಾಡಲಿದೆ. ಲೋಕಸಭೆ ಚುನಾವಣೆವರೆಗೂ ಜನರನ್ನು ಗ್ಯಾರಂಟಿಗಳ ಅಮಲಿನಲ್ಲಿ ತೇಲಿಸಿ ತೇಲಿಸಿ ಆಮೇಲೆ ಕೈ ಎತ್ತುವ ಹುನ್ನಾರ ಸರ್ಕಾರಕ್ಕಿದೆ ಎಂದು ಎಚ್‍ಡಿಕೆ ಆರೋಪಿಸಿದ್ದಾರೆ.

Share This Article
Leave a comment