ಚಲೋ ಚಾಮುಂಡಿ ಬೆಟ್ಟ : ಮಹಿಷ ದಸರಾಗೆ ಬ್ರೇಕ್ – ಪೊಲೀಸ್‌ ಆಯುಕ್ತ ರಮೇಶ್ ಬಾನೋತ್

Team Newsnap
1 Min Read

ಮಹಿಷ ದಸರಾ ಆಚರಣೆಗೆ ಮಹಿಷ ದಸರಾ ಆಚರಣಾ ಸಮಿತಿ ಕರೆ ಕೊಟ್ಟಿತ್ತು. ಅ.13 ರಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ಮಹಿಷನ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಹಿಷ ದಸರಾಗೆ ಚಾಲನೆ ನೀಡಲು ನಿರ್ಧರಿಸಿತ್ತು. 

ಮಹಿಷ ದಸರಾ ವಿರುದ್ಧ ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದರು. ಮಹಿಷ ದಸರಾ ಆಚರಣೆ ವಿರೋಧಿಸಿ ಅದೇ ದಿನ ಚಲೋ ಚಾಮುಂಡಿ ಬೆಟ್ಟ ಹಮ್ಮಿಕೊಳ್ಳಲಾಗಿದೆ. ಪ್ರತಾಪ್‌ ಸಿಂಹ ನೇತೃತ್ವದಲ್ಲಿ ಬಿಜೆಪಿ ಮೈಸೂರಿನಲ್ಲಿ ಈ ಚಲೋ ಚಾಮುಂಡಿ ಬೆಟ್ಟ ಕರೆ ನೀಡಿತ್ತು.

ಮಹಿಷ ದಸರಾ ಆಚರಣೆಗೆ ಮತ್ತು ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನೀಡುವಂತೆ ಎರಡೂ ಕಡೆಯವರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು ಆದರೆ ಇದೀಗ ಮೈಸೂರು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಎರಡು ಮನವಿಗಳನ್ನ ನಿರಾಕರಿಸಿದ್ದಾರೆ.9.4 ಲಕ್ಷ ಮಹಿಳೆಯರಿಗೆ ಹಣ ಸಿಕ್ಕಿಲ್ಲ

ಮೈಸೂರಲ್ಲಿ ಕಾನೂನು ವ್ಯವಸ್ಥೆಗೆ ಧಕ್ಕೆ ಆಗುವ ಹಿನ್ನೆಲೆಯಲ್ಲಿ ಮಹಿಷ ದಸರ ಹಾಗೂ ಚಾಮುಂಡಿ ಬೆಟ್ಟ ಚಲೋ ಜಾಥಾಗೆ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಅವರು ತಿಳಿಸಿದರು.

Share This Article
Leave a comment