ಬಾಲಿವುಡ್ ನಟಿಯರಿಗೇ ಸೆಡ್ಡು : ಸ್ಟಾರ್ ನಟನಿಗೆ ಕೊಡಗಿನ ಕುವರಿ ರಶ್ಮಿಕಾ ನಾಯಕಿ

Team Newsnap
1 Min Read
Kodagu Kuvari Rashmika is the heroine for star actor Tiger shroff ಬಾಲಿವುಡ್ ನಟಿಯರಿಗೇ ಸೆಡ್ಡು : ಸ್ಟಾರ್ ನಟನಿಗೆ ಕೊಡಗಿನ ಕುವರಿ ರಶ್ಮಿಕಾ ನಾಯಕಿ

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅದೃಷ್ಟವಂತೆ ನಟಿ ಎಂಬುದನ್ನ ಸಾಬೀತು ಮಾಡಿದ್ದಾರೆ.

Rashmika Mandanna

ಕಿರಿಕ್ ಪಾರ್ಟಿ ರಶ್ಮಿಕಾ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿಯ ಚೊಚ್ಚಲ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ಸಾಲು ಸಾಲು ಬಾಲಿವುಡ್ ಅವಕಾಶಗಳನ್ನ ಬಾಚಿಕೊಳ್ಳುತ್ತಿದ್ದಾರೆ. ಮಂಡ್ಯ ಸೇರಿ ಇತರ ಜಿಲ್ಲೆಯಲ್ಲೂ ತಲಾ 15 ಲಕ್ಷ ರು ಪಡೆದು ಶಿಕ್ಷಕರ ನೇಮಕಾತಿ: ಕಿಂಗ್ ಪಿನ್ ಬಗ್ಗೆ ಸ್ಪೋಟಕ ಮಾಹಿತಿ

ಸೌತ್ ಸುಂದರಿಯಾಗಿ ನಟಿ ರಶ್ಮಿಕಾ ಈಗ ಬಾಲಿವುಡ್‌ನ ನಟಿಮಣಿಯರನ್ನೇ ಸೆಡ್ಡು ಹೊಡೆದು ಸ್ಟಾರ್ ನಟನಿಗೆ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬಿಟೌನ್ ಸ್ಟಾರ್ ಟೈಗರ್ ಶ್ರಾಫ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. 

RASHMIKA

ಸಿದ್ಧಾರ್ಥ್ ಆನಂದ್ ನಿರ್ಮಾಣದ, ರೋಹಿತ್ ಧವನ್ ನಿರ್ದೇಶನದ ಸಿನಿಮಾದಲ್ಲಿ ಟೈಗರ್ ಶ್ರಾಫ್‌ಗೆ ನಾಯಕಿಯಾಗಿ ರಶ್ಮಿಕಾ ಆಯ್ಕೆ ಆಗಿದ್ದಾರೆ. ವಿಭಿನ್ನ ಪಾತ್ರದ ಮೂಲಕ ರಂಜಿಸಲು ಪುಷ್ಪ ರಶ್ಮಿಕಾ ರೆಡಿಯಾಗಿದ್ದಾರೆ.

ರಶ್ಮಿಕಾ ಬಾಲಿವುಡ್‌ನ ಡೆಬ್ಯೂ ಸಿನಿಮಾ ಇದೇ ಅಕ್ಟೋಬರ್ 7ಕ್ಕೆ `ಗುಡ್ ಬೈ’ ತೆರೆಗೆ ಬರುತ್ತಿದೆ. ಟೈಗರ್ ಶ್ರಾಫ್‌ ಮತ್ತು ರಶ್ಮಿಕಾ ಜೋಡಿ ಅದೆಷ್ಟರ ಮಟ್ಟಿಗೆ ಯಶಸ್ಸುಸಿಗಲಿದೆ ಎಂದು ನೋಡಬೇಕು.

Share This Article
Leave a comment