ಮಂಡ್ಯ ಸೇರಿ ಇತರ ಜಿಲ್ಲೆಯಲ್ಲೂ ತಲಾ 15 ಲಕ್ಷ ರು ಪಡೆದು ಶಿಕ್ಷಕರ ನೇಮಕಾತಿ: ಕಿಂಗ್ ಪಿನ್ ಬಗ್ಗೆ ಸ್ಪೋಟಕ ಮಾಹಿತಿ

Team Newsnap
1 Min Read

2014-15 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಸಹ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.

ಅಕ್ರಮ ನೇಮಕಾತಿಗೆ ಬಗ್ಗೆ ಪ್ರಥಮ ದರ್ಜೆ ಸಹಾಯಕ ಪ್ರಸಾದ್ ಸ್ಪೋಟಕ ಮಾಹಿತಿ ನೀಡಿದ್ದಾರೆ.ಇದನ್ನು ಓದಿ –ಹೊಸದುರ್ಗದಲ್ಲಿ ಶಿಕ್ಷಕರ ಮಾರಾಮಾರಿ – ಸಹ ಶಿಕ್ಷಕನಿಗೆ ಮುಖ್ಯ ಶಿಕ್ಷಕನಿಂದ ಹಲ್ಲೆ

ಸಹ ಶಿಕ್ಷಕರ ಅಕ್ರಮ ನೇಮಕಾತಿಯ ಕಿಂಗ್ ಪಿನ್ ಗಳು ಯಾರು ಎಂಬುದರ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಎರಡನೇ ಪಟ್ಟಿಯಲ್ಲಿ ಆಕ್ರಮ ಅಭ್ಯರ್ಥಿಗಳನ್ನು ಸೇರಿಸಲು ಹೇಳಿದವರು ಯಾರು ಎಂಬುದನ್ನು ತಿಳಿಸಿದ್ದಾರೆ.

ವಿಚಾರಣೆ ವೇಳೆ ಎಂ.ಪಿ. ಮಾದೇಗೌಡ ಹಾಗೂ ಗೀತಾ ಅವರ ವಿರುದ್ಧ ಹೇಳಿಕೆ ನೀಡಿದ್ದಾರೆ. ಇವರಿಬ್ಬರನ್ನು ಬಂಧಿಸಿ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಇವರಿಬ್ಬರ ಆಣತಿಯಂತೆ ಮಂಡ್ಯ ಸೇರಿದಂತೆ ಇತರ ಜಿಲ್ಲೆಗಳ ಪಟ್ಟಿ ತಯಾರಿಸಿರುವುದಾಗಿ ಪ್ರಸಾದ್ ಹೇಳಿದ್ದಾರೆ. 12 ಅಕ್ರಮ ಶಿಕ್ಷಕರನ್ನು ಎರಡನೇ ಪಟ್ಟಿಯಲ್ಲಿ ಸೇರಿಸುವಂತೆ ಹೇಳಿದ್ದರು.

ಅಭ್ಯರ್ಥಿಗಳ ಯಾವುದೇ ಡಾಕ್ಯುಮೆಂಟ್ ಪರಿಶೀಲನೆ ಮಾಡದೆ ಸಹಿ ಮಾಡಿದ್ದರು. ದಾಖಲೆ ಪತ್ರಗಳನ್ನು ಪರಿಶೀಲಿಸದೆ ಡಿಡಿಪಿಐಗಳ ಸಹಿ ಹಾಕಿಸಿದ್ದರು.

ತರಾತುರಿಯಲ್ಲಿ ಕೆಲಸಗಳನ್ನು ಮಾಡಿ ಮುಗಿಸಿದ್ದರು. ನೇಮಕಾತಿಗೆ ಒಬ್ಬೊಬ್ಬ ಶಿಕ್ಷಕರಿಂದ 15 ಲಕ್ಷ ರು ರೂಪಾಯಿ ಪಡೆಯಲಾಗಿತ್ತು.

ಇದೇ ರೀತಿ ಪ್ರತಿ ಜಿಲ್ಲೆಯಲ್ಲಿಯೂ ಅಧಿಕಾರಿಗಳು ಅಕ್ರಮ ಮಾಡಿದ್ದಾರೆ. ಜಿಲ್ಲಾವಾರು ಶಿಕ್ಷಕರ ನೇಮಕಾತಿ ಎರಡನೇ ಪಟ್ಟಿಯನ್ನು ಸಿಐಡಿ ಪಡೆದುಕೊಂಡಿದೆ. ಅಕ್ರಮವಾಗಿ ಆಯ್ಕೆಯಾದ ಶಿಕ್ಷಕರ ಪರಿಶೀಲನೆಗೆ ಸಿಐಡಿ ತಂಡ ಮುಂದಾಗಿದೆ ಎನ್ನಲಾಗಿದೆ.

Share This Article
Leave a comment