ಹೊಸದುರ್ಗದಲ್ಲಿ ಶಿಕ್ಷಕರ ಮಾರಾಮಾರಿ – ಸಹ ಶಿಕ್ಷಕನಿಗೆ ಮುಖ್ಯ ಶಿಕ್ಷಕನಿಂದ ಹಲ್ಲೆ

Team Newsnap
1 Min Read

ವಿದ್ಯಾರ್ಥಿಗಳ ಶುಲ್ಕ ದುರ್ಬಳಕೆ ವಿಚಾರಕ್ಕೆ ಪ್ರೌಢಶಾಲೆ ಶಿಕ್ಷಕರ ಮಧ್ಯೆ ನಡೆದ ಮಾರಾಮಾರಿಯಲ್ಲಿ ಕಿವಿಯೊಳಗಿನ ಪರದೆ ಹರಿಯುವಂತೆ ಸಹ ಶಿಕ್ಷಕನಿಗೆ ಮುಖ್ಯ ಶಿಕ್ಷಕ  ಹಲ್ಲೆ ನಡೆಸಿದ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ನಡೆದಿದೆ.

ಹೊಸದುರ್ಗ ತಾಲೂಕು ಕಲ್ಪತರು ಸಂಯುಕ್ತ ಪ.ಪೂ.ಕಾಲೇಜಿನಲ್ಲಿ ಘಟನೆ ನಡೆದಿದೆ.ಇದನ್ನು ಓದಿ-ಇಂಡೋನೇಷ್ಯಾದಲ್ಲಿ ಫುಟ್‌ಬಾಲ್ ಪಂದ್ಯದ ವೇಳೆ ಕಾಲ್ತುಳಿತ: 127 ಸಾವು, 180 ಜನರಿಗೆ ಗಾಯ

ಮುಖ್ಯ ಶಿಕ್ಷಕ ಶಿವಾನಂದ  ಗಣಿತ ಶಿಕ್ಷಕ ಸುರೇಶ್‍ಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಶಿವಾನಂದ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡಿದ್ದರು. ಈ ಬಗ್ಗೆ ಸುರೇಶ್ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾರಾಮಾರಿ ನಡೆದಿದೆ.

ಆ ಬಳಿಕ ಮಾರಣಾಂತಿಕ ಹಲ್ಲೆಯಾದರೂ ಶಿವಾನಂದ ಜೊತೆ ರಾಜಿಯಾಗುವಂತೆ ಸುರೇಶ್‍ಗೆ ಒತ್ತಡ ಹಾಕಿರುವ ಪ್ರಸಂಗ ನಡೆದಿದೆ.

ಹೊಸದುರ್ಗ ಬಿಇಓ ಜಯ್ಯಪ್ಪ ನೇತೃತ್ವದಲ್ಲಿ ರಾಜಿ ಸಂಧಾನಕ್ಕೆ ಯತ್ನ ನಡೆದಿದೆ.

ಶಿವಾನಂದ ಜೊತೆ ರಾಜಿಯಾಗುವಂತೆ ಸುರೇಶ್‍ಗೆ ಒತ್ತಡ ಹಾಕುತ್ತಿರುವ ವೀಡಿಯೋ ವೈರಲ್ ಆಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯ ಶಿಕ್ಷಕರ ತಪ್ಪೊಪ್ಪಿಗೆ ವೀಡಿಯೋ ಹರಿದಾಡುತ್ತಿದೆ.

Share This Article
Leave a comment