ಕಾಂಗ್ರೆಸ್ ನವರು ಒಂದಾಗಿ ಚುನಾವಣೆ ಎದುರಿಸಬೇಕು -ಡಿಕೆಶಿ ಗೆ ರಮ್ಯಾ ಪಾಠ

Team Newsnap
2 Min Read

ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವತ್ಥ್ ನಾರಾಯಣ ಅವರನ್ನ ಮಾಚಿ ಸಚಿವ ಎಂ ಬಿ ಪಾಟೀಲ್ ಅವರು ಬೇಟಿ ಮಾಡಿರುವ ಸಂಗತಿ ಸಾಕಷ್ಟು ವಾದ ವಿವಾದಗಳಿಗೆ ಕಾರಣವಾಗಿದೆ,

ಈ ಪ್ರಕರಣ ವಿವಾದಕ್ಕೆಡೆ ಆಗಿದ್ದು ಕೆ ಪಿ ಸಿ ಸಿ ಅದ್ಯಕ್ಷ ಡಿ ಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿರುವುದು ಮಾಜಿ ಸಂಸದೆ ರಮ್ಯಾ ಅವರನ್ನು ಕೆರಳುವಂತೆ ಮಾಡಿದೆ.

ಟ್ವೀಟ್‌ ಮಾಡಿರುವ ನಟಿ ರಮ್ಯಾ, ಜನರು ಪಕ್ಷಾತೀತವಾಗಿ ಪರಸ್ಪರ ಭೇಟಿಯಾಗುತ್ತಾರೆ. ಸಮಾರಂಭಗಳಿಗೆ ಹೋಗುತ್ತಾರೆ. ಕೆಲವರು ಆ ಕುಟುಂಬಗಳಲ್ಲಿ ಮದುವೆ ಕೂಡ ಆಗುತ್ತಾರೆ. ಆದರೆ, ಕಟ್ಟಾ ಕಾಂಗ್ರೆಸ್ಸಿಗ ಆಗಿರುವ ಎಂಬಿ ಪಾಟೀಲ್‌ ಅವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಈ ರೀತಿ ಹೇಳಿಕೆ ನೀಡಿರುವುದು ನನಗೆ ಆಶ್ಚರ್ಯ ತಂದಿದೆ. ಪಕ್ಷವೂ ಒಂದೇ ತಂಡವಾಗಿ ಚುನಾವಣೆ ಎದುರಿಸಬೇಕಲ್ಲವೇ ಎಂದು ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದ್ದಾರೆ.

ರಮ್ಯಾ ಟ್ವೀಟ್‌ ಪಾಠ

ರಮ್ಯಾ ಟ್ವೀಟ್‌ ಮೂಲಕ ಕಾಂಗ್ರೆಸ್‌ನಲ್ಲಿ ಬಿರುಕು ಸ್ಪಷ್ಟವಾಗಿ ಕಾಣುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಎಂಬ ಕಾರಣಕ್ಕೆ ಎಂಬಿ ಪಾಟೀಲ್‌ ಅವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಡಿಕೆ ಶಿವಕುಮಾರ್‌ ಆರೋಪ.

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಕುರಿತು ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ್ ಅವರು ತಮ್ಮ ಇಲಾಖೆ ಹಗರಣಗಳ ವಿಚಾರಗಳ ಬಗ್ಗೆ ಯಾರೂ ಧ್ವನಿ ಎತ್ತಬಾರದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆರೋಪಿಸಿದ್ದರು. ಅದಲ್ಲದೇ, ಇದೊಂದು ಖಾಸಗಿ ಭೇಟಿ. ಅವರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಸಲಹೆ ಪಡೆಯಲು ಎಂಬಿ ಪಾಟೀಲ್‌ ಅವರ ಮನೆಗೆ ಹೋಗಿದ್ದೆ ಎಂಬ ಸಬೂಬನ್ನು ಅಶ್ವತ್ಥ್‌ ನಾರಾಯಣ ನೀಡುತ್ತಾರೆ ಎಂದು ಹೇಳಿದ್ದರು.

ಡಿಕೆಶಿ ಆರೋಪ ತಿರಸ್ಕಾರ – ಎಂಬಿ ಪಾಟೀಲ್‌!

“ಅಶ್ವತ್ಥ್‌ ನಾರಾಯಣ ಅವರನ್ನು ನಾನು ಇತ್ತೀಚೆಗೆ ಭೇಟಿಯಾಗಿಲ್ಲ. ಸದನ ನಡೆಯುವ ಸಮಯದಲ್ಲಿ ಭೇಟಿ ಆಗಿರಬಹುದು. ಆದರೆ ಭೇಟಿಯಾಗಬಾರದು ಅಂತ ಏನಿಲ್ಲ. ನನ್ನ ಮಗ, ಅವರ ಮಗಳು ಕ್ಲಾಸ್‌ಮೇಟ್ಸ್. ಅಶ್ವತ್ಥ್ ನಾರಾಯಣ ಅವರು ಉನ್ನತ ಶಿಕ್ಷಣ ಸಚಿವರು. ಅವರನ್ನು ಭೇಟಿ‌ ಮಾಡಿದ್ರೆ ತಪ್ಪಿಲ್ಲ .” ಎಂದು ಹೇಳಿ ಆರೋಪವನ್ನು ತಿರಸ್ಕರಿಸಿದ್ದಾರೆ.

Share This Article
Leave a comment