ವರ್ಷದೊಳಗೆ ಮೊಮ್ಮಗು – ಇಲ್ಲವೇ 5 ಕೋಟಿ ಪರಿಹಾರ: ಮಗನ ವಿರುದ್ಧವೇ ದೂರು

Team Newsnap
1 Min Read

ಉತ್ತರಾಖಂಡದ ನ್ಯಾಯಲಯದಲ್ಲಿ ಎಸ್ ಆರ್ ಪ್ರಸಾದ್ ಮತ್ತು ಪತ್ನಿ “ನಮಗೆ ಮೊಮ್ಮಗು ಬೇಕು ಅದು ಸಾಧ್ಯ ಇಲ್ಲ ಅಂದ್ರೆ 5 ಕೋಟಿ ರೂ ಪರಿಹಾರ ಬೇಕು ” ಎಂದು ಮಗ ಹಾಗೂ ಸೊಸೆಯ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನು ಓದಿ : YSV ದತ್ತ ಮುಂದಿನ ತಿಂಗಳು ಕಾಂಗ್ರೆಸ್ ಗೆ ಸೇರ್ಪಡೆ ? ಆಪ್ತನ ಬಳಿ ದತ್ತ ಹೇಳಿರುವ ಆಡಿಯೋ ವೈರಲ್

ಹರಿದ್ವಾರದಲ್ಲಿ ಮೊಮ್ಮಗುವಿಗಾಗಿ ಸ್ವಂತ ಮಗನ ವಿರುದ್ಧವೇ ನ್ಯಾಯಲಯ ಮೆಟ್ಟಿಲೇರಿದ ಅಪರೂಪ ಪ್ರಸಂಗ ನಡೆದಿದೆ. ಯಾವ ಮಗುವಾದರೂ ತೊಂದರೆಯಿಲ್ಲ,2016 ರಲ್ಲಿ ಮಗನ ಮದುವೆ ಮಾಡಿದ್ದೆವು,ಮೊಮ್ಮಕ್ಕಳನ್ನು ನೋಡುವ ಬಯಕೆ ನಮಗಿದೆ,ನಮಗೆ ಮೊಮ್ಮಗು ಬೇಕು ಅಷ್ಟೇ ಎಂದು ಡಿಮ್ಯಾಂಡ್ ಮಾಡಿದ್ದಾರೆ.

ನಮ್ಮ ಅರ್ಜಿಯಲ್ಲಿ ಮಗ ಹಾಗೂ ಸೊಸೆಯಿಂದ ತಲಾ 2.5 ಕೋಟಿ ರೂ ಪರಿಹಾರ ಕೇಳಿದ್ದೇವೆ,ನಮ್ಮ ಮಗನಿಗೆ ಅಮೇರಿಕಾದಲ್ಲಿ ವಿದ್ಯಾಭ್ಯಾಸ ಕೊಡಿಸಿದ್ದೇವೆ,ಮಗನ ಬೆಳವಣಿಗೆ ಹಾಗೂ ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದು ಆರ್ಥಿಕವಾಗಿ ಬಹಳ ತೊಂದರೆ ಅನುಭವಿಸಿದ್ದೇವೆ,ನಮ್ಮ ಬಳಿ ಈಗ ಹಣವಿಲ್ಲ ಎಂದು ಹೇಳಿದ್ದಾರೆ.

ನಾವು ನಮ್ಮ ಮಕ್ಕಳನ್ನು ಪ್ರಬಲ ಮತ್ತು ಸಮರ್ಥರನ್ನಾಗಿ ಮಾಡುತ್ತೇವೆ,ಪೋಷಕರ ಆರ್ಥಿಕ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ,ಈ ಪ್ರಕರಣವು ಸಮಾಜದ ವಾಸ್ತವವನ್ನು ತೆರೆದಿಡುತ್ತದೆ ಎಂದು ಮಗನ ವಿರುದ್ಧ ವಕಾಲತ್ತು ವಹಿಸಿರುವ ವಕೀಲ ಎ ಕೆ ಶ್ರೀವಾಸ್ತವ ತಿಳಿಸಿದ್ದಾರೆ.

Share This Article
Leave a comment