May 26, 2022

Newsnap Kannada

The World at your finger tips!

ysv datta

YSV ದತ್ತ ಮುಂದಿನ ತಿಂಗಳು ಕಾಂಗ್ರೆಸ್ ಗೆ ಸೇರ್ಪಡೆ ? ಆಪ್ತನ ಬಳಿ ದತ್ತ ಹೇಳಿರುವ ಆಡಿಯೋ ವೈರಲ್

Spread the love

ಜೆಡಿಎಸ್ ನ ಮತ್ತೊಂದು ವಿಕೆಟ್ ಉರುಳಲು ತುದಿಗಾಲಿನಲ್ಲಿ ನಿಂತಿದೆ, ದೇವೇಗೌಡರ ಮಾನಸ ಪುತ್ರ, ಬಲಗೈ ಬಂಟ ಎಂದೇ ಖ್ಯಾತಿಯಾಗಿದ್ದ YSV ದತ್ತ ದಳಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ. ಸ್ವತಃ ದತ್ತ ಅವರೇ ತಮ್ನ ಆಪ್ತನೊಂದಿಗೆ ದೂರವಾಣಿಯಲ್ಲಿ ಈ ಕುರಿತಂತೆ ಮಾತನಾಡಿರುವ ಎಲ್ಲಾ ಸಂಗತಿಗಳು ಪುಲ್ ವೈರಲ್ ಆಗಿದೆ.

ಸಿದ್ದಾಮಣ್ಣ ಕಾಂಗ್ರೆಸ್ ಸೇರು, MLA ಮಾಡಿ, ಮಂತ್ರಿ ಮಾಡುವೆ ಎಂದು ಹೇಳ್ತಾ ಇದ್ದಾರೆ. ಮುಂದೆ ನಿಮಗೆಲ್ಲಾ ಒಳ್ಳೆಯದಾಗುತ್ತೆ ಎಂದಿದ್ದಾರೆ. ನಾನು ಇನ್ನೂ ತೀರ್ಮಾನ ಮಾಡಬೇಕಿದೆ ಎಂದು ಆಡಿಯೋದಲ್ಲಿ ವೈಎಸ್ ವಿ ದತ್ತ ಆಪ್ತನಿಗೆ ಹೇಳಿದ್ದಾರೆ.

ಇದನ್ನು ಓದಿ :PSI ನೇಮಕಾತಿ ಅಕ್ರಮ: ತಮ್ಮನ ಬಂಧನ – ನೊಂದ ಅಣ್ಣ ಆತ್ಮಹತ್ಯೆಗೆ ಶರಣು

ಈ ಕುರಿತಂತ ಸ್ಪಷ್ಟನೆ ನೀಡಿರು ದತ್ತ, ಕಾಂಗ್ರೆಸ್ ಸೇರುವ ಸಂಬಂಧ ನಾವು ಇನ್ನೂ ಕ್ಷೇತ್ರದ ಜನಾಭಿಪ್ರಾಯ ಸಂಗ್ರಹ ಮಾಡಬೇಕಿದೆ. ನಾನು ಯಾವತ್ತೂ ಜೆಡಿಎಸ್ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರುವೆ ಎಂದು ಹೇಳಿಲ್ಲ. ಜನರು ಹಾಗೂ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದರು.

ನನ್ನನ್ನು ಕಾಂಗ್ರೆಸ್ ಗೆ ಆಹ್ವಾನ ಮಾಡಿದ್ದಾರೆಂಬ ಸಿದ್ದರಾಮಯ್ಯನವರ ಅಭಿಪ್ರಾಯದ ಬಗ್ಗೆಯೂ ನಾನು ಈಗಲೇ ಏನು ಹೇಳಲಾರೆ. ಆದರೆ ಒಂದಂತೂ ಸತ್ಯ ಕ್ಷೇತ್ರದಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಯುತ್ತಿದೆ ಎಂದು ದತ್ತಾ ಹೇಳಿದರು.

error: Content is protected !!