December 22, 2024

Newsnap Kannada

The World at your finger tips!

chaval

ಕೊನೆ ಕ್ಷಣದಲ್ಲಿ ಮೋಡಿ ಮಾಡಿದ ಚಹಾಲ್: ರಾಜಸ್ಥಾನಕ್ಕೆ 7 ರನ್​ಗಳ ರೋಚಕ ಗೆಲುವು

Spread the love

ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ರಾಜಸ್ಥಾನ್ ರಾಯಲ್ಸ್ ಕೊನೆ ಕ್ಷಣದಲ್ಲಿ 7 ರನ್​ಗಳಿಂದ ರೋಚಕ ಗೆಲುವು ಸಾಧಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ಗೆ ಬಂದ ರಾಜಸ್ಥಾನ್ ರಾಯಲ್ಸ್​, ಬಟ್ಲರ್ ಅಮೋಘ ಶತಕದ ನೆರವಿನಿಂದ 217 ರನ್​ಗಳನ್ನ ಕಲೆ ಹಾಕಿತು.

218 ರನ್​ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್​, 19.4 ಓವರ್​ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 7 ರನ್ ನಿಂದ ಸೋಲಿಗೆ ಶರಣಾಯ್ತು.

KKR ತಂಡದಲ್ಲಿ ಸಿಕ್ಸರ್ ಹಾಗೂ ಫೋರ್​ಗಳ ಸುರಿಮಳೆಗೈಯ್ಯುತ್ತಿದ್ದ ಫಿಂಚ್​ಗೆ ಅಯ್ಯರ್ ಉತ್ತಮ ಸಾಥ್ ನೀಡಿದರು. ಕೇವಲ 28 ಬಾಲ್​ಗಳಲ್ಲಿ ಎರಡು ಸಿಕ್ಸರ್ ಹಾಗೂ 9 ಬೌಂಡರಿಗಳನ್ನ ಬಾರಿಸಿ ಗೆಲುವಿನ ಭರವಸೆಯನ್ನು ಫಿಂಚ್ ತಂದುಕೊಟ್ಟರು.

ಆದರೆ 207.14 ಸ್ಟ್ರೈಕ್​ರೇಟ್​ನಲ್ಲಿ 58 ರನ್​ಗಳಿಸಿ ಆಡುತ್ತಿದ್ದಾಗ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

ಫಿಂಚ್ ಔಟ್ ಆಗ್ತಿದ್ದ ಅಯ್ಯರ್ ಅವರ ಆರ್ಭಟ ಜೋರಾಯ್ತು. 51 ಬಾಲ್​ಗಳನ್ನು ಎದುರಿಸಿದ ಅಯ್ಯರ್ 166.67 ಸ್ಟ್ರೈಕ್ ರೇಟ್​ನೊಂದಿಗೆ 85 ರನ್​ಗಳನ್ನು ಬಾರಿಸಿ ಗೆಲುವಿನ ದಡಕ್ಕೆ ತಂಡವನ್ನು ತಂದು ನಿಲ್ಲಿಸಿದರು

ಈ ವೇಳೆ ಅಯ್ಯರ್ 4 ಸಿಕ್ಸರ್ 6 ಬೌಂಡರಿಗಳನ್ನು ಬಾರಿಸಿದರು. ಆದರೆ 17ನೇ ಓವರ್​ನಲ್ಲಿ ಚಹಾಲ್ ಮಾಡಿದ ಮ್ಯಾಜಿಕ್​ಗೆ ಅಯ್ಯರ್ ಕ್ರೀಸ್​ನಿಂದ ನಿರಾಸೆಯಿಂದ ಹೊರನಡೆದರು.

ರಾಜಸ್ತಾನ ರಾಯಲ್ಸ್ ತಂಡದ ಭರವಸೆಯ ಆಟಗಾರ ಯುಜ್ವೇಂದ್ರ ಚಾಹಲ್ 2022ರ IPL ನ 15 ನೇ ಆವೃತ್ತಿಯಲ್ಲಿ ಮೊಟ್ಟ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದರು ಅಲ್ಲದೇ 40 ರನ್ ಗಳನ್ನು ನೀಡಿ 5 ವಿಕೆಟ್ ಪಡೆದು ತಂಡವನ್ನು ಗೆಲ್ಲುವಂತೆ ಮಾಡಿದರು.

Copyright © All rights reserved Newsnap | Newsever by AF themes.
error: Content is protected !!