ಜೇಮ್ಸ್​ ಚಿತ್ರಕ್ಕೆ ಅಪ್ಪು ವಾಯ್ಸ್​ ರೀ-ಕ್ರಿಯೇಟ್ – ಏಪ್ರಿಲ್ 22 ರಂದು ರೀ ರಿಲೀಜ್

Team Newsnap
1 Min Read

ಪವರ್​​ಸ್ಟಾರ್ ಡಾ.ಪುನೀತ್​ ರಾಜ್​ಕುಮಾರ್​ ಅಭಿನಯದ ‘ಜೇಮ್ಸ್’ ಚಿತ್ರದ ಪಾತ್ರಕ್ಕೆ ಅಪ್ಪು ಅವರ ಧ್ವನಿಯನ್ನೇ ಸೇರಿಸಿದ ನಂತರ ಏಪ್ರಿಲ್ 22 ರಂದು ‘ಜೇಮ್ಸ್’ ಅಪ್ಡೇಟ್ ಆಗಿ ಪ್ರದರ್ಶನ ಕಾಣಲಿದೆ.

ಮಾಧ್ಯಮಗೋಷ್ಟಿಯಲ್ಲಿ ನಿರ್ದೇಶಕ ಚೇತನ್ ಕುಮಾರ್ ಈ ವಿಷಯ ತಿಳಿಸಿ , ಸೌಂಡ್ ಎಂಜಿನಿಯರಿಂಗ್ ತಂತ್ರಜ್ಞಾನ ಬಳಸಿ ಬರುವ ಶುಕ್ರವಾರ ಅಭಿಮಾನಿಗಳು ಚಿತ್ರವನ್ನು ಹೊಸ ರೂಪದಲ್ಲಿ ಕಣ್ತುಂಬಿಕೊಳ್ಳಲಿದ್ದಾರೆ ಎಂದರು.

ಅಪ್ಪು ಒರಿಜಿನಲ್ ಧ್ವನಿಯನ್ನು ‘ಜೇಮ್ಸ್’ ಚಿತ್ರಕ್ಕೆ ಸೇರಿಸಲಾಗುತ್ತಿದೆ. ಅಂದಿನಿಂದ ಹೊಸ ರೂಪದಲ್ಲಿ ಪ್ರೇಕ್ಷಕರಿಗೆ ‘ಜೇಮ್ಸ್’ ಲಭ್ಯವಾಗಲಿದೆ ಎಂದು ಚೇತನ್ ಕುಮಾರ್ ಮಾಹಿತಿ ನೀಡಿದ್ದಾರೆ.

ವಾಯ್ಸ್ ಮಿಕ್ಸಿಂಗ್ ತಂತ್ರಜ್ಞಾನ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲಿಯೇ ಮೊದಲ ಪ್ರಯತ್ನವಾಗಿದೆ. ಹಲವು ವರ್ಷಗಳಿಂದ ರಿಸರ್ಚ್ ನಡೆಯುತ್ತಿತ್ತು. ಸಿನಿಮಾಗಳಿಗೆ ಎಲ್ಲಾ ಭಾಷೆಗೆ ಆಯಾ ಕಲಾವಿದರ ಧ್ವನಿ ಸೇರಿಸುವ ಮೊದಲ ಪ್ರಯತ್ನ ಇದಾಗಿದೆ.

ನಟರ ಧ್ವನಿಯನ್ನು ಮರು ಸೃಷ್ಟಿಸುವ ನಿಟ್ಟಿನಲ್ಲಿ ಕಳೆದ ಮೂರು  ವರ್ಷಗಳಿಂದ ಕೆಲಸ ಮಾಡುತ್ತಿರುವ ಸೌಂಡ್​​ ಇಂಜಿನಿಯರ್​ ಶ್ರೀನಿವಾಸ್​ರಾವ್​ (ಪಪ್ಪು )ಕೊನೆಗೂ ‘ಜೇಮ್ಸ್​​’ ಚಿತ್ರದಲ್ಲಿ ಪುನೀತ್​ ಅವರ ಧ್ವನಿಯನ್ನು ರೀ ಕ್ರಿಯೇಟ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಾವು ಈ ಹಿಂದೆಯೇ ಅಪ್ಪು ಅವರ ಧ್ವನಿಯನ್ನು ರೀ ಕ್ರಿಯೇಟ್​ ಮಾಡುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ವಿ. ಕೊನೆಗೂ ಆಗದೆ ಶಿವಣ್ಣ ಅವರಿಂದ ಡಬ್​ ಮಾಡಿಸಲಾಗಿತ್ತು. ನಟ ಶ್ರೀಕಾಂತ್​ ಅವರ ಮೂಲಕ ಸೌಂಡ್​​ ಇಂಜಿನಿಯರ್​ ಶ್ರೀನಿವಾಸ್​ ರಾವ್​ ಅವರ ಪರಿಚಯ ಆಯ್ತು. ಶ್ರೀನಿವಾಸ್​ ರಾವ್ ಅವರು ನಟರ ಧ್ವನಿಯನ್ನು ಅವರು ಮರು ಸೃಷ್ಟಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Share This Article
Leave a comment