ಫುಟ್ಬಾಲ್ ಆಟಗಾರ ರೊನಾಲ್ಡೊ ಗಂಡು ಮಗು ಸಾವು

Team Newsnap
0 Min Read

ಪೋರ್ಚಗೀಚ್ ಲೆಜೆಂಡರಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ಗಂಡು ಮಗುವನ್ನು ಕಳೆದುಕೊಂಡಿದ್ದಾರೆ.

ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಅವರು, ನಾನು ಮತ್ತು ನನ್ನ ಗರ್ಲ್​ ಫ್ರೆಂಡ್ ​ಜಾರ್ಜಿನಾ ರೊಡ್ರಿಗಸ್ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದೆವು. ಆದರೆ ನಮ್ಮ ಗಂಡು ಮಗು ತೀರಿಕೊಂಡಿದೆ ಎಂದು ತಿಳಿಸಿದ್ದಾರೆ.

ಇದು ಯಾವುದೇ ಪೋಷಕರು ಅನುಭವಿಸಲಾಗದ ದೊಡ್ಡ ನೋವಾಗಿದೆ. ನಮ್ಮ ಹೆಣ್ಣು ಮಗುವಿನ ಜನನವು ಈ ಕ್ಷಣವನ್ನು ಸ್ವಲ್ಪ ಭರವಸೆಯಿಂದ ಬದುಕಲು ನಮಗೆ ಶಕ್ತಿ ನೀಡಿದೆ ಎಂದು ಭಾವನ್ಮಾಕವಾಗಿ ರೊನಾಲ್ಡೊ ಬರೆದುಕೊಂಡಿದ್ದಾರೆ.

Share This Article
Leave a comment