ಬೆಂಗಳೂರಿನಲ್ಲಿ ಭಾರಿ ಮಳೆ : ಸಿಲಿಕಾನ್ ಸಿಟಿ ಜಾಲಾವೃತ : ಮನೆಗಳಿಗೆ ನುಗ್ಗಿದ ನೀರು- ಜನರ ಪರದಾಟ

Team Newsnap
1 Min Read

ತಡರಾತ್ರಿ ಪೂರ್ಣ ಸುರಿದ ಮಳೆಗೆ ರಾಜ್ಯ ರಾಜಧಾನಿ ಬೆಂಗಳೂರು ತತ್ತರಿಸಿ ಹೋಗಿದೆ. ತಡ ರಾತ್ರಿ ಪೂರ್ಣ ವರುಣನ ಆರ್ಭಟಕ್ಕೆ ಜನರು ಹೈರಾಣಾಗಿ ಹೋಗಿದ್ದಾರೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

rain b

ಓಕಳಿಪುರಂ ಅಂಡರ್ ಪಾಸ್​ನಲ್ಲಿ ಮಳೆ ನೀರು ನಿಂತಿದೆ, ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ರಸ್ತೆಯಲ್ಲಿನ ನೀರು ಹೊರ ಹೊಗದೇ ಅವಾಂತರ ಸೃಷ್ಟಿಯಾಗಿದೆ.

ನಿನ್ನೆ ಸಂಜೆಯಿಂದ ಶುರುವಾದ ಮಳೆಯಬ್ಬರದ ಅವಾಂತರಗಳು ಒಂದೆರಡಲ್ಲ. ಗೊರಗೊಂಟೆಪಾಳ್ಯ ಫ್ಲೈ ಓವರ್ ಬಳಿ ಸಂಪೂರ್ಣ ಟ್ರಾಫಿಕ್​ ಜಾಮ್ ಆಗಿತ್ತು. ಔಟರ್ ರಿಂಗ್ ರೋಡ್‌ನಲ್ಲಿ ಗಂಟೆಗಟ್ಟಲೆ ವಾಹನ ಸವಾರರು ಪರದಾಡುವ ಪರಿಸ್ಥಿತಿ, ಟ್ರಾಫಿಕ್​ ಜಾಮ್​ನಿಂದ ನಗರದಿಂದ ಹೊರವಲಯಕ್ಕೆ ಹೋಗುವವರ ಪಾಡು ಹೇಳತೀರದಂತಾಗಿದೆ.

ಗುರವೇ ಪರಬ್ರಹ್ಮ|| ಶಿಕ್ಷಕರ ದಿನಾಚರಣೆ (Teachers Day – 2022)

ದಾವಣಗೆರೆ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಹರಿಹರ, ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ಭಾರೀ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬೆಳ್ಳಂಬೆಳಗ್ಗೆ ಭಾರೀ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

ತುಮಕೂರು ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ಗುಬ್ಬಿ ತಾಲೂಕಿನ ಸಿ. ಅರಿವೇಸಂದ್ರ ಗಾಮದಲ್ಲಿ 50 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಬೆಂಗಳೂರಿನಲ್ಲಿ ಮುಂದಿನ 3 ಗಂಟೆ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಬೆಂಗಳೂರು, ಕೊಪ್ಪಳ, ರಾಯಚೂರು, ಬಳ್ಳಾರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಕೋಲಾರ, ಮಂಡ್ಯ, ರಾಮನಗರ,ಶಿವಮೊಗ್ಗ, ತುಮಕೂರು, ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Share This Article
Leave a comment