ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ : ಪ್ರಧಾನಿ ಮೋದಿ- ಗಡ್ಕರಿಗೆ ಸಂಸದೆ ಸುಮಲತಾ ಸುಧೀರ್ಘ ಪತ್ರ

Team Newsnap
1 Min Read
Tomorrow Mandya MP Sumalatha Ambarish will inspect National Highway work ನಾಳೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ

ಮಂಡ್ಯ ಜಿಲ್ಲೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಬೆಂಗಳೂರು – ಮೈಸೂರು ಹೆದ್ದಾರಿಯ ಪರಿಣಾಮ, ಮಳೆ ನೀರಿನ ಹರಿವು ಸರಿಯಾಗಿ ಆಗದೆ ಹಲವು ಕಡೆ ಗದ್ದೆಗಳು, ಹಳ್ಳಿ ರಸ್ತೆಗಳು, ಮನೆಗಳು ಜಲಾವೃತಗೊಂಡು ಜನ-ಜೀವನಕ್ಕೆ ಅಪಾರ ಹಾನಿಯನ್ನುಂಟು ಮಾಡಿದೆ.

ಈ ಕುರಿತು ಮಂಡ್ಯ ಸಂಸದೆ ಸುಮಲತಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರುಗಳಿಗೆ ಸುದೀರ್ಘ ಪತ್ರ ಬರೆದು, ಹೆದ್ದಾರಿಯಲ್ಲಿ ಕಳಪೆ ಕಾಮಗಾರಿಯಿಂದ ಕೆಲವು ಸ್ಥಳಗಳಲ್ಲಿ ವಾಹನ ದಟ್ಟಣೆ ಜೊತೆಗೆ ಅಪಘಾತಗಳು ಸಂಭವಿಸಿರುವ ಬಗ್ಗೆ ಗಮನ ಸೆಳೆದಿರುವ ಸಂಸದೆ ಸುಮಲತಾ
ಜನರ ಜೀವನಕ್ಕೆ ತೊಂದರೆಯಾಗಿರುವ ಬಗ್ಗೆ ಪತ್ರಿಕಾ ವರದಿಗಳನ್ನು ಅವರ ಗಮನಕ್ಕೆ ತಂದಿದ್ದಾರೆ

ಈ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನೀರಿನ ಹರಿವಿಗೆ ಕಾಲುವೆ-ಚರಂಡಿಗಳನ್ನು ನಿರ್ಮಿಸಿದ್ದರೂ, ಅವರ ಉದ್ದೇಶಕ್ಕೂ ಈಗ ಎದುರಾಗಿರುವ ಪರಿಸ್ಥಿತಿಗೂ ತಾಳೆಯಾಗುತ್ತಿಲ್ಲ. ನೀರಿನ ಹರಿವು ಸರಿಯಾಗಿ ಆಗದೆ, ಹೆದ್ದಾರಿ ಪಕ್ಕದ ಹೊಲ ಗದ್ದೆಗಳಲ್ಲಿ ನೀರು ನಿಂತಿದೆ. ಸಂಚಾರಕ್ಕೆ ಮಾತ್ರವಲ್ಲದೆ, ಜನರ ಆರೋಗ್ಯಕ್ಕೂ ತೊಂದರೆಯಾಗುವ ಪರಿಸ್ಥಿತಿ ಬಂದಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಉಪಯುಕ್ತ ಯೋಜನೆ : ಸಚಿವ ಗೋಪಾಲಯ್ಯ

WhatsApp Image 2022 09 04 at 11.57.32 PM

ಹಳ್ಳಿಯ ಜನರು ಮತ್ತು ಜಾನುವಾರುಗಳ ಸಂಚಾರಕ್ಕೂ ಹೆದ್ದಾರಿಯ ಸರ್ವಿಸ್ ರಸ್ತೆಗಳು, ಪಾದಚಾರಿ ಮಾರ್ಗಗಳು ಸಮರ್ಪಕವಾಗಿಲ್ಲ. ಹೆದ್ದಾರಿ ಅಧಿಕಾರಿಗಳು ಈ ಕೂಡಲೇ, ಪರಿಸ್ಥಿತಿಯ ಗಂಭೀರತೆ ಅರಿತು, ನೀರಿನ ಹರಿವಿಗೆ ಸಮರ್ಪಕ ಚರಂಡಿ ವ್ಯವಸ್ಥೆ, ಸರ್ವಿಸ್ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಸರಿಯಾದ ರೀತಿಯಲ್ಲಿ ವಿನ್ಯಾಸ ಮಾಡಲು ಸೂಚಿಸುವಂತೆ ಸುಮಲತಾ ಮನವಿ ಮಾಡಿದ್ದಾರೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕೂಡಲೇ ಕ್ರಮ ತೆಗೆದುಕೊಂಡು, ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸುತ್ತೀರೆಂದು ಭರವಸೆ ಇದೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.

Share This Article
Leave a comment