ಗಾಯಕ ರಘು ದಿಕ್ಷೀತ್ ಗೆ ಮಾತೃ ವಿಯೋಗ

Team Newsnap
1 Min Read

ಸಂಗೀತ ನಿದೇ೯ಶಕ , ಗಾಯಕ ​​ ರಘು ದೀಕ್ಷಿತ್ ತಾಯಿ ನಿಧನರಾಗಿದ್ದಾರೆ.

ರಘು ದೀಕ್ಷಿತ್ ತಂಡ ದುಬೈನಲ್ಲಿ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಶೋ ನೀಡುತ್ತಿರುವಾಗಲೇ ಇತ್ತ ತನ್ನ ತಾಯಿ ಸಾವನ್ನಪ್ಪಿದ್ದಾರೆ ಸುದ್ದಿ ಬಂದಿದೆ.

ದುಬೈನಲ್ಲಿ ಮ್ಯೂಸಿಕ್ ಶೋ ಮುಗಿಯುತ್ತಿದ್ದಂತೆಯೇ ರಘು ದೀಕ್ಷಿತ್ ದುಬೈನಿಂದ ಭಾರತಕ್ಕೆ ಆಗಮಿಸಿದ್ದಾರೆ . ಈಗಾಗಲೇ ರಘು ದೀಕ್ಷಿತ್​ ಮನೆಯತ್ತ ಸಹೋದರ ವಾಸು ದೀಕ್ಷಿತ್​ ಸೇರಿದಂತೆ ಕುಟುಂಬಸ್ಥರು ದೌಡೌಯಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಸೂರಜ್ ಗೌಡ ಹಾಗೂ ಧನ್ಯ ರಾಮ್ ಕುಮಾರ್ ಅಭಿನಯದ “ನಿನ್ನ ಸನಿಹಕೆ” ಸಿನಿಮಾವನ್ನು ಮೈಸೂರಿನಲ್ಲಿ ಮಾಲ್​​ನಲ್ಲಿ ತನ್ನ ತಾಯಿ ನೋಡಿದ್ದರು. ಬಳಿಕ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಘು ದೀಕ್ಷಿತ್​​ ತಾಯಿಯವರ ಆರೋಗ್ಯ ತೀರ ಹದಗೆಟ್ಟಿತ್ತು ಎಂದು ಹೇಳಿದ್ದಾರೆ.

Share This Article
Leave a comment