ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ಮಾರ್ಗ ಮಧ್ಯದಲ್ಲೇ ದೆಹಲಿಗೆ ವಾಪಸ್

Team Newsnap
1 Min Read

ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಉಕ್ರೇನ್‍ನಲ್ಲಿ ವಾಸವಾಗಿರುವ ಭಾರತೀಯ ಪ್ರಜೆಗಳನ್ನು ಕರೆತರಲು ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯೆಯೇ ದೆಹಲಿಗೆ ವಾಪಸ್ ಆಗಿದೆ.

ಈಗಾಗಲೇ ಉಕ್ರೇನ್‍ನ ಪೂರ್ವ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿ ಕಾರ್ಯಚರಣೆ ನಡೆಸುತ್ತಿದೆ.

ಈ ಮಧ್ಯೆ ಉಕ್ರೇನ್ ತನ್ನ ಭದ್ರತೆಗಾಗಿ ವಾಯುಪ್ರದೇಶವನ್ನು ಮುಚ್ಚಿದೆ. ಇದರಿಂದಾಗಿ ಸಾವಿರಾರು ಭಾರತೀಯರು ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದಾರೆ ಸ್ವದೇಶಕ್ಕೆ ಬರಲು ಕಾಯುತ್ತಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಬೆಳಗ್ಗೆ ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸುವಂತೆ ತನ್ನ ಸೇನೆಗೆ ಪುಟಿನ್ ಸೂಚನೆ ನೀಡಿದ್ದಾರೆ.

ಈ ಸೂಚನೆ ಬೆನ್ನಲ್ಲೇ ರಷ್ಯಾ ಸೇನೆಯು ವೈಮಾನಿಕ ದಾಳಿ ನಡೆಸಿದೆ. ಇದರಿಂದಾಗಿ ಉಕ್ರೇನ್‍ನ ಪೂರ್ವ ಪ್ರದೇಶಗಳಲ್ಲಿ ಮಿಲಿಟರಿ ಕಾರ್ಯಚರಣೆ ನಡೆಯುತ್ತಿದೆ. , ಎಲ್ಲಾ ವಾಣಿಜ್ಯ ವಿಮಾನಗಳು ಹೆಚ್ಚಿನ ಅಪಾಯದಲ್ಲಿವೆ. ಈ ಹಿನ್ನೆಲೆಯಲ್ಲಿ ಆದರೆ ಉಕ್ರೇನ್‍ಗೆ ಹೋಗುವ ಎಲ್ಲಾ ವಿಮಾನಗಳಿಗೆ ಏರ್‌ಮೆನ್‍ಗಳಿಗೆ ಸರ್ಕಾರ ಸೂಚನೆಯನ್ನು ನೀಡಿದ ನಂತರ ಏರ್ ಇಂಡಿಯಾ ವಿಮಾನವು ದೆಹಲಿಗೆ ವಾಪಾಸಾಗಲು ನಿರ್ಧರಿಸಿತು.

Share This Article
Leave a comment