ಉಕ್ರೇನ್‍ನಲ್ಲಿ ಸಿಲುಕಿರುವ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

Team Newsnap
1 Min Read

ರಷ್ಯಾ ಮತ್ತು ಉಕ್ರೇನ್ ನಡುವೆ ದಾಳಿ ಅರಂಭವಾಗಿದೆ ಕರ್ನಾಟಕದ 10 ಮಂದಿ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ.

ಉಕ್ರೇನ್ ನಲ್ಲಿ ಬೆಂಗಳೂರು ವಿದ್ಯಾರ್ಥಿಗಳ ಪೋಷಕರು ಆತಂಕದಲ್ಲಿ ಇದ್ದಾರೆ. ಈ ದಾಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳ ಪೋಷಕರು ವಾಟ್ಸ್ ಆ್ಯಪ್ ವೀಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿ ಇದ್ದಾರೆ.

ಬೆಳಗ್ಗೆಯಿಂದ ಬಾಂಬ್ ಬ್ಲಾಸ್ಟ್ ಸದ್ದು ಕೇಳಿಬರುತ್ತಿದೆ ನಾವು ಸುರಕ್ಷಿತವಾಗಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಪ್ರಸ್ತುತ ಭಾರತಕ್ಕೆ ಬರಲು ವಿಮಾನ ಸಿಗದೇ ಇರುವುದರಿಂದ ವಾಪಸಾಗಲು ಪರದಾಡುತ್ತಿದ್ದಾರೆ. ಸುದ್ದಿ ತಿಳಿದ ಅಧಿಕಾರಿಗಳು ವಿದ್ಯಾರ್ಥಿಗಳ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

ಸಿಎಂ ಬೊಮ್ಮಾಯಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ವಿದ್ಯಾರ್ಥಿಗಳ ಜೊತೆ ವಿದೇಶಾಂಗ ಕಾರ್ಯದರ್ಶಿ ನಿರಂತರ ಸಂಪರ್ಕದಲ್ಲಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿರಿಸುತ್ತೇವೆ. ವಿದ್ಯಾರ್ಥಿಗಳ ಕುಟುಂಬದವರಿಗೆ ಮಾಹಿತಿ ನೀಡಲಾಗುವುದು ಎಂದು ಭರವಸೆಯನ್ನು ಕೊಟ್ಟಿದ್ದಾರೆ.

ವಿದ್ಯಾರ್ಥಿಗಳು ಏರ್ ಪೋರ್ಟ್ ತನಕ ಬಸ್ ನಲ್ಲಿ ಬಂದಿದ್ದರು. ಏರ್ ಪೋರ್ಟ್‍ಗೆ ಬಂದ ಮೇಲೆ ಸಮಸ್ಯೆ ಕಾಣಿಸಿಕೊಂಡಿದ್ದು, ವಿಮಾನಗಳು ಹಾರಾಟ ಮಾಡಿಲ್ಲ. ಈ ಹಿನ್ನೆಲೆ ವಿದ್ಯಾರ್ಥಿಗಳು ಬಸ್ ನಲ್ಲೇ ಸಿಕ್ಕಿಕೊಂಡಿದ್ದಾರೆ. ಅವರಿಗೆ ಈಗ ಎಲ್ಲಿಗೆ ಬರಬೇಕು, ಯಾವುದು ಸುರಕ್ಷಿತ ಸ್ಥಳ ಎಂಬ ಮಾಹಿತಿ ನೀಡುತ್ತಿದ್ದೇವೆ ಎಂದರು.

Share This Article
Leave a comment