ಭಾರತದ ಷೇರು ಮಾರುಕಟ್ಟೆ ಗಡ ಗಡ : ಸೆನ್ಸೆಕ್ಸ್ 2700ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ- 13.57 ಕೋಟಿ ನಷ್ಟ

Team Newsnap
1 Min Read

ರಷ್ಯಾ ಉಕ್ರೇನ್ ವಿರುದ್ದ ಯುದ್ದ ಘೋಷಣೆ ಮಾಡಿದ ನಂತರ ಭಾರತದಲ್ಲಿ ಷೇರು ಮಾರುಕಟ್ಟೆ ಗಡ ಗಡ ನಡುಗಿದೆ.

ಇಂದು ಮಧ್ಯಾಹ್ನ 3.30 ಗಂಟೆ ಹೊತ್ತಿಗೆ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿಯಲ್ಲಿ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿತು.

ಸೆನ್ಸೆಕ್ಸ್ 2700ಕ್ಕೂ ಹೆಚ್ಚು ಪಾಯಿಂಟ್ಸ್ ಮತ್ತು ನಿಫ್ಟಿ 800ಕ್ಕೂ ಹೆಚ್ಚು ಪಾಯಿಂಟ್ಸ್ ನೆಲ ಕಚ್ಚಿದೆ.
ಇನ್ನು, ಸೆನ್ಸೆಕ್ಸ್ 2,702.15 ಪಾಯಿಂಟ್ಸ್ ಅಥವಾ ಶೇ 4.72ರಷ್ಟು ಹಾಗೂ ನಿಫ್ಟಿ 815.30 ಪಾಯಿಂಟ್ಸ್ ಅಥವಾ ಶೇ 4.78ರಷ್ಟು ಕುಸಿತ ಕಂಡಿದೆ.

ಜತೆಗೆ ಇದರ ಅಂತರರಾಷ್ಟ್ರೀಯ ಕಚ್ಚಾ ತೈಲ ದರದ ಬೆಲೆಯೂ ಬ್ಯಾರೆಲ್​ಗೆ 103 USD ಆಗಿದೆ.

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಲ್ಲಿ ಭಾರೀ ಕುಸಿತಗೊಂಡ ಪರಿಣಾಮ ವ್ಯವಹಾರದಲ್ಲಿ ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು 13.57 ಲಕ್ಷ ಕೋಟಿಗೂ ಹೆಚ್ಚು ಕರಗಿ ಹೋಗಿದೆ. ಆದ್ದರಿಂದ ಎಲ್ಲ ವಲಯದ ಷೇರುಗಳು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಬುಧವಾರ ಬೆಳಿಗ್ಗೆ ಆರಂಭದಲ್ಲಿ ಕೇವಲ 242 ಕೋಟಿ ನಷ್ಟವಾಗಿತ್ತು. ನಂತರ ಭಾರೀ ಪ್ರಮಾಣದಲ್ಲಿ ಗುರುವಾರ ಮಧ್ಯಾಹ್ನದ ಹೊತ್ತಿಗೆ ಬರೋಬ್ಬರಿ 13.57 ಲಕ್ಷ ಕೋಟಿ ನಷ್ಟವಾಗಿದೆ.

Share This Article
Leave a comment