7 ತಿಂಗಳ ಗರ್ಭಿಣಿ ಮಂಗಳೂರಿನ ಪ್ರೊಬೇಷನರಿ ಮಹಿಳಾ ಪಿಎಸ್​​ಐ ಕೊರೋನಾ ಬಲಿ

Team Newsnap
1 Min Read

7 ತಿಂಗಳ ಗರ್ಭಿಣಿಯಾಗಿದ್ದ ಮಂಗಳೂರಿನ ಪ್ರೊಬೇಷನರಿ
ಮಹಿಳಾ ಪಿಎಸ್​​ಐ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಕರ್ತವ್ಯದಲ್ಲಿದ್ದ ಕೋಲಾರ ಮೂಲದ ಶ್ಯಾಮಿಲಿ (24) ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಶ್ಯಾಮಿಲಿ 7 ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಎರಡು ತಿಂಗಳ ಹಿಂದೆ ಇಲಾಖೆಯಿಂದ ರಜೆ ಪಡೆದು ಕೋಲಾರಕ್ಕೆ ಹೋಗಿದ್ದರು.

ಈ ವೇಳೆ ಅವರಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮೇ 2ರಂದು ಕೋಲಾರದ ಆರ್.ಎಂ. ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಪಿಎಸ್​ಐ ಶಾಮಿಲಿ (24) ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ಕುರಿತು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ,

Share This Article
Leave a comment