ಕೊರೊನಾ ಓಡಿಸಿ ಹಳ್ಳಿ ಉಳಿಸಿ-ಜಿಲ್ಲಾಧಿಕಾರಿಗಳು ಸೈನಿಕರಂತೆ – ಸ್ವತಂತ್ರ ನಿರ್ಧಾರ ಕೈಗೊಳ್ಳಿ: ಪ್ರಧಾನಿ ಮೋದಿ ಕರೆ

Team Newsnap
1 Min Read
Modi to Hubballi on January 12: Preparations for the rush ಜನವರಿ 12ರಂದು ಹುಬ್ಬಳ್ಳಿಗೆಮೋದಿ: ಭರದ ಸಿದ್ಧತೆ

ದೇಶದಲ್ಲಿರುವ ಪ್ರತಿಯೊಬ್ಬ ಜಿಲ್ಲಾಧಿಕಾರಿಗಳು ಫೀಲ್ಡ್ ಕಮಾಂಡರ್​ಗಳು. ಡಿಸಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಉಂಟು. ಅದನ್ನು ಬಳಕೆ ಮಾಡಿಕೊಂಡು ಇಡೀ ಜಿಲ್ಲೆಯನ್ನ ಸೋಂಕಿನಿಂದ ರಕ್ಷಿಸಬೇಕು. ಜಿಲ್ಲೆಗಳು, ಹಳ್ಳಿಗಳು ಕೊರೊನಾ ವಿರುದ್ಧ ಗೆಲುವು ಸಾಧಿಸಿದರೆ ದೇಶವೇ ಗೆದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಜಿಲ್ಲಾಧಿಕಾರಿಗಳಿಗೆ ಕರೆ ನೀಡಿದರು .‌

ಗ್ರಾಮೀಣ ಭಾಗದ ಜನರು ಸೋಂಕು ಹರಡದಂತೆ ಎಚ್ಚರ ವಹಿಸಲು ಯಾವೆಲ್ಲ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬ ಜಾಗೃತಿಯನ್ನು ಮೂಡಿಸಬೇಕಿದೆ.‌

  • ಮಂಗಳವಾರ ದೇಶದ 47 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಕೊರೊನಾ ನಿಯಂತ್ರಣ ತಪ್ಪಿಸುವ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ನಂತರ ಜಿಲ್ಲಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಿ ಮೋದಿ ಉವಾಚ :

  • ನೀವು ಮಾಡಿರುವ ಉತ್ತಮ ಕೆಲಸಗಳನ್ನು ನನಗೆ ಕಳುಹಿಸಿ. ನಿಮ್ಮ ಕೆಲಸಗಳು ಇಡೀ ದೇಶಕ್ಕೆ ಪರಿಚಯ ಮಾಡುತ್ತವೆ.
  • ನಿಮ್ಮ ಜಿಲ್ಲೆ ಕೊರೊನಾ ಸೋಲಿಸಿದರೆ ನಾವು ಕೊರೊನಾ ಗೆದ್ದಂತೆ.. ಪ್ರತಿ ಗ್ರಾಮವೂ ಕೊರೊನಾ ಸೋಂಕು ಹರಡದಂತೆ ತಡೆಯಬೇಕು.. ಕೊರೊನಾ ಹರಡದಂತೆ ತಡೆಯುವ ಪ್ರತಿಜ್ಞೆಯನ್ನೂ ಮಾಡಬೇಕು.
  • ಗ್ರಾಮಕ್ಕೆ ಅದರದ್ದೇ ಆದ ಶಕ್ತಿ ಇರುತ್ತೆ, ಅದರದ್ದೇ ಉಪಯೋಗ ಇರುತ್ತೆ.. ಕೊರೊನಾ ವಿರುದ್ಧದ ಈ ಯುದ್ಧದಲ್ಲಿ ನೀವು ಜವಾಬ್ದಾರಿ ಹೊಂದಿದ್ದೀರಿ
  • ಪರಿಸ್ಥಿತಿಗೆ ಅನುಸಾರವಾಗಿ ನೀವೇ ನಿರ್ಧಾರ ತೆಗೆದುಕೊಳ್ಳಬೇಕು. ಒಬ್ಬ ಸೈನಿಕ ಕೂಡ ಇದೇ ರೀತಿ ನಿರ್ಧಾರವನ್ನು ತೆಗೆದುಕೊಳ್ತಾನೆ. ಸ್ಥಳೀಯ ಕಂಟೈನ್ಮೆಂಟ್ ಝೋನ್​ಗಳೇ ಈ ಯುದ್ಧದಲ್ಲಿ ನಮ್ಮ ಅಸ್ತ್ರ.
  • ಯಾರು ಮೋಸ ಮಾಡುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ.
  • ಫ್ರಂಟ್ ಲೈನ್ ವರ್ಕರ್​ಗಳಿಗೆ ನಾವು ಪ್ರೋತ್ಸಾಹ ಕೊಡಬೇಕು. ಸರ್ಕಾರದ ಪಾಲಿಸಿಯಲ್ಲಿ ಬದಲಾವಣೆ ಬೇಕಾದರೆ ತಿಳಿಸಿ. ನಿಮ್ಮ ಅನಿಸಿಕೆಗಳನ್ನು ನಿಸ್ಸಂಕೋಚವಾಗಿ ನಮಗೆ ತಿಳಿಸಿ.

*ಆಸ್ಪತ್ರೆಯಲ್ಲಿ ಎಷ್ಟು ಬೆಡ್​ಗಳು, ಎಲ್ಲಿ ಲಭ್ಯವಿವೆ ಅನ್ನೋ ಮಾಹಿತಿ ಸಿಗಬೇಕು. ಸುಲಭವಾಗಿ ಈ ಮಾಹಿತಿ ನೀಡಿದರೆ ಜನರಿಗೂ ಇದರಿಂದ ಅನುಕೂಲ.

  • ಸಂಖ್ಯೆ ಕಡಿಮೆಯಾಗುತ್ತಿದ್ದರೂ ನಾವು ಸಾಕಷ್ಟು ಎಚ್ಚರಿಕೆಯಿಂದರ ಬೇಕು.. ಹೋರಾಟ ಇರೋದು ಒಂದೊಂದು ಜೀವನವನ್ನು ಉಳಿಸೋದು. ಸೋಂಕು ಹರಡದಂತೆ ತಡೆಯುವುದು ಸಹ ನಮ್ಮ ಹೋರಾಟವಾಗಿದೆ.
Share This Article
Leave a comment