ದೇಶದಲ್ಲಿರುವ ಪ್ರತಿಯೊಬ್ಬ ಜಿಲ್ಲಾಧಿಕಾರಿಗಳು ಫೀಲ್ಡ್ ಕಮಾಂಡರ್ಗಳು. ಡಿಸಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಉಂಟು. ಅದನ್ನು ಬಳಕೆ ಮಾಡಿಕೊಂಡು ಇಡೀ ಜಿಲ್ಲೆಯನ್ನ ಸೋಂಕಿನಿಂದ ರಕ್ಷಿಸಬೇಕು. ಜಿಲ್ಲೆಗಳು, ಹಳ್ಳಿಗಳು ಕೊರೊನಾ ವಿರುದ್ಧ ಗೆಲುವು ಸಾಧಿಸಿದರೆ ದೇಶವೇ ಗೆದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಜಿಲ್ಲಾಧಿಕಾರಿಗಳಿಗೆ ಕರೆ ನೀಡಿದರು .
ಗ್ರಾಮೀಣ ಭಾಗದ ಜನರು ಸೋಂಕು ಹರಡದಂತೆ ಎಚ್ಚರ ವಹಿಸಲು ಯಾವೆಲ್ಲ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬ ಜಾಗೃತಿಯನ್ನು ಮೂಡಿಸಬೇಕಿದೆ.
ಮಂಗಳವಾರ ದೇಶದ 47 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಕೊರೊನಾ ನಿಯಂತ್ರಣ ತಪ್ಪಿಸುವ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ನಂತರ ಜಿಲ್ಲಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿ ಉವಾಚ :
ನೀವು ಮಾಡಿರುವ ಉತ್ತಮ ಕೆಲಸಗಳನ್ನು ನನಗೆ ಕಳುಹಿಸಿ. ನಿಮ್ಮ ಕೆಲಸಗಳು ಇಡೀ ದೇಶಕ್ಕೆ ಪರಿಚಯ ಮಾಡುತ್ತವೆ.
ನಿಮ್ಮ ಜಿಲ್ಲೆ ಕೊರೊನಾ ಸೋಲಿಸಿದರೆ ನಾವು ಕೊರೊನಾ ಗೆದ್ದಂತೆ.. ಪ್ರತಿ ಗ್ರಾಮವೂ ಕೊರೊನಾ ಸೋಂಕು ಹರಡದಂತೆ ತಡೆಯಬೇಕು.. ಕೊರೊನಾ ಹರಡದಂತೆ ತಡೆಯುವ ಪ್ರತಿಜ್ಞೆಯನ್ನೂ ಮಾಡಬೇಕು.
ಗ್ರಾಮಕ್ಕೆ ಅದರದ್ದೇ ಆದ ಶಕ್ತಿ ಇರುತ್ತೆ, ಅದರದ್ದೇ ಉಪಯೋಗ ಇರುತ್ತೆ.. ಕೊರೊನಾ ವಿರುದ್ಧದ ಈ ಯುದ್ಧದಲ್ಲಿ ನೀವು ಜವಾಬ್ದಾರಿ ಹೊಂದಿದ್ದೀರಿ
ಪರಿಸ್ಥಿತಿಗೆ ಅನುಸಾರವಾಗಿ ನೀವೇ ನಿರ್ಧಾರ ತೆಗೆದುಕೊಳ್ಳಬೇಕು. ಒಬ್ಬ ಸೈನಿಕ ಕೂಡ ಇದೇ ರೀತಿ ನಿರ್ಧಾರವನ್ನು ತೆಗೆದುಕೊಳ್ತಾನೆ. ಸ್ಥಳೀಯ ಕಂಟೈನ್ಮೆಂಟ್ ಝೋನ್ಗಳೇ ಈ ಯುದ್ಧದಲ್ಲಿ ನಮ್ಮ ಅಸ್ತ್ರ.
ಯಾರು ಮೋಸ ಮಾಡುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ.
ಫ್ರಂಟ್ ಲೈನ್ ವರ್ಕರ್ಗಳಿಗೆ ನಾವು ಪ್ರೋತ್ಸಾಹ ಕೊಡಬೇಕು. ಸರ್ಕಾರದ ಪಾಲಿಸಿಯಲ್ಲಿ ಬದಲಾವಣೆ ಬೇಕಾದರೆ ತಿಳಿಸಿ. ನಿಮ್ಮ ಅನಿಸಿಕೆಗಳನ್ನು ನಿಸ್ಸಂಕೋಚವಾಗಿ ನಮಗೆ ತಿಳಿಸಿ.
*ಆಸ್ಪತ್ರೆಯಲ್ಲಿ ಎಷ್ಟು ಬೆಡ್ಗಳು, ಎಲ್ಲಿ ಲಭ್ಯವಿವೆ ಅನ್ನೋ ಮಾಹಿತಿ ಸಿಗಬೇಕು. ಸುಲಭವಾಗಿ ಈ ಮಾಹಿತಿ ನೀಡಿದರೆ ಜನರಿಗೂ ಇದರಿಂದ ಅನುಕೂಲ.
ಸಂಖ್ಯೆ ಕಡಿಮೆಯಾಗುತ್ತಿದ್ದರೂ ನಾವು ಸಾಕಷ್ಟು ಎಚ್ಚರಿಕೆಯಿಂದರ ಬೇಕು.. ಹೋರಾಟ ಇರೋದು ಒಂದೊಂದು ಜೀವನವನ್ನು ಉಳಿಸೋದು. ಸೋಂಕು ಹರಡದಂತೆ ತಡೆಯುವುದು ಸಹ ನಮ್ಮ ಹೋರಾಟವಾಗಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ