November 25, 2024

Newsnap Kannada

The World at your finger tips!

petrol 1

ಪೆಟ್ರೋಲ್. ಡೀಸೆಲ್. ಆಹಾರ ಪದಾರ್ಥ ಬೆಲೆ ಏರಿಕೆ : ಮಂಡ್ಯದಲ್ಲಿ ಆಕ್ರೋಶ

Spread the love

ಪೆಟ್ರೋಲ್, ಡೀಸೆಲ್ ಹಾಗೂ ಆಹಾರ ಪದಾರ್ಥಗಳ ಬೆಲೆ ಏರಿಕೆ ವಿರೋಧಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮಂಡ್ಯ ನಗರದಲ್ಲಿ ಪ್ರತಿಭಟನೆ ಮಂಗಳವಾರ ನಡೆಸಿದರು.

petrol2

ಸಂಘಟನೆಯ ಕಾರ್ಯಕರ್ತರು ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಕೆಲಕಾಲ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜನಸಾಮಾನ್ಯರು ಪ್ರತಿನಿತ್ಯ ಬಳಕೆ ಮಾಡುವ ಪದಾರ್ಥಗಳ ಬೆಲೆ ಏರಿಕೆಯಾಗಲು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ನೇರ ಹೊಣೆಯಾಗಿದೆ ಎಂದು ದೂರಿದರು.

ಅಂತರ ರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದ ಪೆಟ್ರೋಲ್ ಡೀಸೆಲ್ ದರ ಹೆಚ್ಚಳವಾಗಿದೆ ಎಂದು ಸಬೂಬು ಹೇಳುವ ಆಳುವ ಸರ್ಕಾರಗಳು ಪೆಟ್ರೋಲ್ ಗೆ ಮೂಲದರ 31 ರು ಇದ್ದರೆ, ಕೇಂದ್ರ ಸರ್ಕಾರ 16.5, ರಾಜ್ಯ ಸರ್ಕಾರ 38.5 ರೂ. ತೆರಿಗೆ ಹಾಕಿದ್ದಾರೆ. ಕಮಿಷನ್ 6.5 ರೂ ನಿಂದ ಜನಸಾಮಾನ್ಯರಿಗೆ ದುಬಾರಿ ಹೊರಬಿದ್ದಿದೆ ಎಂದು ಕಿಡಿಕಾರಿದರು.

ಅಗತ್ಯವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಬಡಜನತೆಯ ಜೀವನ ಮಾಡುವುದು ದುಸ್ತರವಾಗಿದೆ. ಅಡುಗೆ ಅನಿಲ.ಅಕ್ಕಿ,ಬೇಳೆ,ಎಣ್ಣೆ ಪದಾರ್ಥಗಳನ್ನು ಜನತೆ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಜನರ ಬದುಕನ್ನು ಬೀದಿಗೆ ತಳ್ಳುತ್ತಿದ್ದಿರಿ. ಇದು ಅಚ್ಚೆದಿನವಾ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಪ್ರತಿವರ್ಷ 2 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು.ಆದರೆ ಉದ್ಯೋಗ ಸೃಷ್ಟಿಯಾಗಿಲ್ಲ,ಇದರಿಂದ ಯುವಜನರ ಬದುಕು ಸಂಕಷ್ಟ ಮಯವಾಗಿದೆ ರೈತರ ಬದುಕನ್ನು ಮೂರಾಬಟ್ಟೆ ಮಾಡಲಾಗಿದೆ ಎಂದು ಆಕ್ರೋಶಿಸಿದರು.

ಜನಸಾಮಾನ್ಯರು ಕೈಗೆಟಕುವ ದರದಲ್ಲಿ ಆಹಾರ ಪದಾರ್ಥಗಳನ್ನು ಖರೀದಿ ಸುವಂತಾಗಬೇಕು. ಕಳ್ಳತನ ಸುಲಿಗೆ ಮಾಡದೆ ಜನತೆ ಸ್ವಾಭಿಮಾನದಿಂದ ಬದುಕಬೇಕು, ಇದು ನಿಜವಾಗಿಯೂ ಅಚ್ಚೆ ದಿನ ಆದರೆ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿದ ತಪ್ಪಿಗೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಸಂಘಟನೆಯ ಯೋಗಣ್ಣ, ವಿನಯ್.ರವೀಂದ್ರ.ಅರುಣ್, ಬೋರೇಗೌಡ, ಮಾಲತಿ, ಗೀತಾ ನೇತೃತ್ವ ವಹಿಸಿದ್ದರು

Copyright © All rights reserved Newsnap | Newsever by AF themes.
error: Content is protected !!