ತೆಲುಗು ಯುವಕ ಗೌತಮ್ ಚಂದ್ರ ಕನ್ನಡದಲ್ಲಿ ಸಾಧನೆಯ ಹಾದಿಯತ್ತ

Team Newsnap
1 Min Read
  • ವಿಶ್ವ ಕನ್ನಡ ಪದಬಂಧ ಪ್ರೇಮಿಗಳಿಗೆ ಪ್ರತಿ ನಿತ್ಯ ಹೊಸ ಕನ್ನಡ ಪದಬಂಧ

ಕೊರಿಯಾದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವ, ಆಂದ್ರಪ್ರದೇಶ ಮೂಲದ ಗೌತಮ್ ಚಂದ್ರ ಎನ್ ಕನ್ನಡ ಪದಬಂಧ ಆಪ್ ಅಭಿವೃದ್ಧಿಪಡಿಸಿದ್ದಾರೆ.

padband

ತಮ್ಮ ಇಂಡಿಕ್ ಕ್ರಾಸ್’ವರ್ಡ್ಸ್ ಮೂಲಕ ವಿಶ್ವದಾದ್ಯಂತ ಇರುವ ಕನ್ನಡ ಪದಬಂಧ ಪ್ರೇಮಿಗಳಿಗೆ ಪ್ರತಿ ನಿತ್ಯ ನೂತನ ಕನ್ನಡ ಪದಬಂಧ ಸೇವೆ ಒದಗಿಸುತ್ತಿದ್ದಾರೆ.

ಭಾರತದಲ್ಲಿ ಅತ್ಯಂತ ಹೆಚ್ಚು ಪದಬಂಧ ಸೃಷ್ಟಿಸುವ ಮೂಲಕ, ಸತತ ಮೂರು ವರ್ಷ ಲಿಮ್ಕಾ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲೆ ಮಾಡಿಕೊಂಡಿರುವ ಅ.ನಾ.ಪ್ರಹ್ಲಾದರಾವ್ ನಿತ್ಯ ಪದಬಂಧಗಳನ್ನು ರಚಿಸಿಕೊಡುತ್ತಿದ್ದಾರೆ.

ಗೌತಮ್ ಚಂದ್ರ ತಮ್ಮ ಇಂಡಿಕ್ ಕ್ರಾಸ್’ವರ್ಡ್ಸ್ ಮೂಲಕ ಪ್ರತಿ ನಿತ್ಯ ತೆಲುಗು ಹಾಗೂ ತಮಿಳು ಪದಬಂಧಗಳನ್ನು ನೀಡುತ್ತಿದ್ದಾರೆ. ಇದೀಗ ಕನ್ನಡ ಪದಬಂಧಗಳನ್ನು ನೀಡಲಾರಂಭಿಸಿದ್ದಾರೆ.

ಪದಬಂಧದ ಅಪ್ ಬಳಕೆದಾರರ ಸ್ನೇಹಿಯಾಗಿದೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ತೆಲುಗಿನಲ್ಲಿ ಖ್ಯಾತ ಪದಬಂಧ ರಚನೆಕಾರ ಸುಧಾಮ ಪದಬಂಧ ರಚಿಸುತ್ತಿದ್ದಾರೆ.

https://indic-crosswords.ndklabs.com/
ಸಂಪರ್ಕ: +82 10-9485-0039 (ವಾಟ್ಸ್ ಅಪ್)

Share This Article
Leave a comment