ರೈತರಿಗೆ ಸಂತಸದ ಸುದ್ದಿ: ನಂದಿನಿ ಪಶು ಆಹಾರ ದರದಲ್ಲಿ ಇಳಿಕೆ

Team Newsnap
1 Min Read
  • ಮಾ. 10ರ ನಂತರ ಹಾಲು ಖರೀದಿ ದರ ಹೆಚ್ಚಳಕ್ಕೆ ಮನ್ ಮುಲ್ ನಿರ್ಧಾರ

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ನಂದಿನಿ ಪಶು ಆಹಾರ ಮಾರಾಟ ದರದಲ್ಲಿ ಪರಿಷ್ಕರಿಸಿ ಮಾ.೧ರಿಂದ ೩೧ ರವರೆಗೆ ಅನ್ವಯವಾಗುವಂತೆ ಮಾರಾಟ ದರದಲ್ಲಿ ಇಳಿಕೆ ಮಾಡಲಾಗಿದೆ.

ನಂದಿನಿ ಗೋಲ್ಡ್ ಪಶು ಆಹಾರ 50 ಕೆಜಿ ಚೀಲಕ್ಕೆ 965 ರೂ. ನಿಂದ 940 ರೂ.ಗೆ ಹಾಗೂ ನಂದಿನಿ ಬೈಪಾಸ್ ಪಶು ಆಹಾರ 1085 ರೂ.ನಿಂದ 1060 ರೂ. ಇಳಿಕೆ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಆರ್. ರಾಮಚಂದ್ರು ತಿಳಿಸಿದ್ದಾರೆ.

  • ಕೋವಿಡ್-೧೯ ಪರಿಸ್ಥಿತಿಯಿಂದ ಪಶು ಆಹಾರ ಬೇಡಿಕೆ ಹೆಚ್ಚಿಸಲು ಹಾಗೂ ರೈತರಿಗೆ ಹಾಲಿನ ಉತ್ಪಾದನಾ ವೆಚ್ಚವನ್ನು ತಗ್ಗಿಸುವ ಮೂಲಕ ಉತ್ಪಾದಕರಿಗೆ ಉತ್ತೇಜನ ನೀಡುವ ಹಿತದೃಷ್ಟಿಯಿಂದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತವು ಪಶು ಆಹಾರ ಮಾರಾಟ ದರವನ್ನು 2020ರ ನ. 5 ಹಾಗೂ 2021ರ ಜನವರಿ 1ರಿಂದ ಅನ್ವಯವಾಗುವಂತೆ ಪ್ರತಿ ಮೆಟ್ರಿಕ್ ಟನ್ ಗೆ 500 ರೂ.ನಂತೆ ಮತ್ತು 1000 ರೂ. ನಂತೆ ಕ್ರಮವಾಗಿ ಪ್ರತಿ ಮೆಟ್ರಿಕ್ ಟನ್ ಗೆ 1500 ರೂ.ನಂತೆ ಕಡಿತಗೊಳಿಸಿ ಪರಿಷ್ಕರಿಸಲಾಗಿದೆ.
  • ಪಶು ಆಹಾರ ಮಾರಾಟ ದರವನ್ನು 2021 ರ ಮಾ. 1 ರಿಂದ 31ರವರೆಗೆ ಹಾಲಿ ಇರುವ ಪ್ರತಿ ಟನ್ ಗೆ 1500 ರೂ. ರಿಯಾಯಿತಿ ಜೊತೆಗೆ ಇನ್ನೂ 500 ರೂ.ಗಳನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ ಹಾಲಿನ ಖರೀದಿ ದರದಲ್ಲಿ ಹೆಚ್ಚಳ:
  • ರೈತರು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಕುವ ಪ್ರತಿ ಲೀಟರ್ ಹಾಲಿಗೆ ಮಾ.10 ನಂತರ ದರ ಹೆಚ್ಚಳ ಮಾಡುವುದಾಗಿ ಒಕ್ಕೂಟದ ಅಧ್ಯಕ್ಷ ಬಿ.ಆರ್. ರಾಮಚಂದ್ರು ತಿಳಿಸಿದ್ದಾರೆ.
Share This Article
Leave a comment