ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ನಾಳೆಯಿಂದ ಕಬ್ಬು ಅರೆಯುವಿಕೆ ಪುನರಾರಂಭ

Team Newsnap
1 Min Read

ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿದ್ದ ಮಂಡ್ಯ ಜಿಲ್ಲೆ ರೈತರ ಜೀವನಾಡಿಯಾಗಿದ್ದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ (ನಾಳೆಯಿಂದ) ಶುಕ್ರವಾರದಿಂದ ಪ್ರಸಕ್ತ ಹಂಗಾಮಿನ ಕಬ್ಬು ಅರೆಯಲು ಸಕಲ ಸಿದ್ದತೆ ಮಾಡಲಾಗಿದೆ. ಎಂ.ಆರ್.ಎನ್(ನಿರಾಣಿ) ಉದ್ಯಮ ಸಮೂಹ ಸಂಸ್ಥೆಯು ಕಾರ್ಖಾನೆಯನ್ನು 40 ವರ್ಷಗಳ ಕಾಲ ಗುತ್ತಿಗೆಗೆ ಪಡೆದ ಮೇಲೆ 3500 ಟಿಸಿಡಿ ಸಾಮರ್ಥ್ಯವನ್ನು 5000 ಟಿಸಿಡಿಗೆ ಹೆಚ್ಚಿಸುವ ವಿಸ್ತರಣೆ ಕಾರ್ಯವನ್ನು ಸಮಾರೋಪಾದಿಯಲ್ಲಿ ಮಾಡಿ ಈಗ ಕಬ್ಬು ಅರೆಯುವ ಘಟ್ಟ ತಲುಪಿದೆ.
ರಾಜ್ಯ ಸರ್ಕಾರದ ಜೊತೆ ಎಂ.ಆರ್. ಎನ್ (ನಿರಾಣಿ) ಉದ್ಯಮ ಸಮೂಹ ಸಂಸ್ಥೆಯ ಒಡಂಬಡಿಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿರದ ಕಾರಣ ಯಾವುದೇ ಬ್ಯಾಂಕುಗಳಿಂದ ಪಿ.ಎಸ್.ಎಸ್.ಕೆ ಗೆ ಹಣಕಾಸಿನ ನೆರವು ಪಡೆಯಲು ಇದೂವರೆಗೆ ಸಾಧ್ಯವಾಗಿಲ್ಲ . ಹೀಗಾದರೂ ಎಂ.ಆರ್. ಎನ್ (ನಿರಾಣಿ) ಉದ್ಯಮ ಸಮೂಹ ಸಂಸ್ಥೆಯು ರೈತರು ಹಾಗೂ ಕಾರ್ಮಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಖಾನೆ ಪುನರಾರಂಭ ಮಾಡಲಾಗಿದೆ.

ಕೇವಲ 60 ದಿನಗಳಲ್ಲಿ, ಸ್ಥಗಿತಗೊಂಡಿದ್ದ ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ತಿಗೊಳಿಸಿ ಸಾಮರ್ಥ್ಯ ವಿಸ್ತರಿಸುವ ಸವಾಲಿನ ಕಾರ್ಯವನ್ನೂ ಯಶಸ್ವಿಯಾಗಿ ಮಾಡಲಾಗಿದೆ.

ಕಾರ್ಮಿಕರು, ಆಡಳಿತ ಮಂಡಳಿಯ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಈಗಾಗಲೇ ಕಾರ್ಮಿಕರ ಹಿಂದಿನ ವರ್ಷಗಳ ವೇತನ ಪಾವತಿಗಾಗಿ 6 ಕೋಟಿ ನೀಡಲಾಗಿದೆ. ಉಳಿದ ಹಣವನ್ನು ಸರ್ಕಾರದ ಒಡಂಬಡಿಕೆ ಪ್ರಕ್ರಿಯೆ ಕಾರ್ಯಗಳು ಪೂರ್ಣಗೊಂಡ 24 ಘಂಟೆಗಳಲ್ಲಿ ಪಾವತಿ ಮಾಡಲಾಗುವುದು ಸಂಸ್ಥೆಯ ಮಾಲೀಕ ಮುರಗೇಶ್ ನಿರಾನಿ ತಿಳಿಸಿದ್ದಾರೆ.

5 ವರ್ಷಗಳ ಹಿಂದೆ ಕಾರ್ಖಾನೆ ಸ್ಥಗಿತಗೊಂಡಾಗಿನಿಂದ ಇಲ್ಲಿಯವರೆಗೆ ಇದ್ದ ಯಾವ ಸಿಬ್ಬಂದಿಯನ್ನೂ ಕೈಬಿಟ್ಟಿಲ್ಲ ಎಲ್ಲಾ ಸಿಬ್ಬಂದಿಗಳನ್ನು ಮುಂದುವರೆಸಲಾಗಿದೆ. ಪಿ.ಎಸ್.ಎಸ್.ಕೆಯನ್ನು ಆಧುನೀಕರಣಗೊಳಿಸಲು ಅಗತ್ಯವಿದ್ದ ಹೆಚ್ಚಿನ ಸಿಬ್ಬಂದಿ ನೇಮಕಾತಿಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಲಾಗಿದೆ.
ಪ್ರಸ್ತತ ಕಾರ್ಖಾನೆ ಕಾರ್ಯಾರಂಭ ಆಗಿಲ್ಲದ ಕಾರಣ ಪಿ.ಎಸ್.ಎಸ್.ಕೆಗೆ ಯಾವುದೇ ಆದಾಯವಿರುವುದಿಲ್ಲ. ಆದರೂ ಇದೇ ಶುಕ್ರವಾರದಿಂದ ಕಾರ್ಖಾನೆ ಆರಂಭವಾಗಲಿದೆ., ಪ್ರತಿ ಹದಿನೈದು ದಿನಗಳಿಗೊಮ್ಮೆ ನಿಗದಿಪಡಿಸಿದ ಎಫ್.ಆರ್.ಪಿ ದರದಂತೆ ರೈತರಿಗೆ ಕಬ್ಬಿನ ಹಣ ಪಾವತಿಸಲಾಗುವುದು. ಕಾರ್ಮಿಕರಿಗೆ ಪ್ರತಿ ತಿಂಗಳ ಮೊದಲನೇ ವಾರದಲ್ಲಿಯೇ ಸಂಬಳ ನೀಡಲಾಗುವುದು.
ರೈತರ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಪಿ.ಎಸ್.ಎಸ್.ಕೆಯನ್ನು ಎಂ.ಆರ್. ಎನ್ (ನಿರಾಣಿ) ಉದ್ಯಮ ಸಮೂಹ ಸಂಸ್ಥೆಯು ಸದೃಢವಾಗಿದೆ ಎಂದು ಹೇಳಿದ್ದಾರೆ.

Share This Article
Leave a comment