ಡ್ರಗ್ಸ್ ದಂಧೆ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ: ಶಾಸಕ ಸುರೇಶ್ ಗೌಡ

Team Newsnap
1 Min Read

ಡ್ರಗ್ಸ್ ದಂಧೆಯು ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ. ಈ ಮೊದಲು ಡ್ರಗ್ಸ್ ದಂಧೆ ಇರುವುದು ಸರ್ಕಾರಕ್ಕೆ ಗೊತ್ತಿರಲಿಲ್ಲವಾ?’ ಎಂದು‌ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಸರ್ಕಾರಕ್ಕೆ ಪ್ರಶ್ನಿಸಿದರು.

ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಶಾಸಕ ಸುರೇಶ್ ಗೌಡ ‘ನಮ್ಮ ಕರ್ನಾಟಕದಲ್ಲೇ ಕ್ಯಾಸಿನೋ ತೆರೆಯವದರಿಂದ ನಮ್ಮ ದುಡ್ಡೆಲ್ಲ ನಮ್ಮಲ್ಲೇ ಉಳಿಯುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಬೇಕೆಂದಿದ್ದೇನೆ’ ಎಂದು ಹೇಳಿದರು.

ಜಮೀರ್ ಕುರಿತು ಮಾತನಾಡಿದ ಶಾಸಕರು ಜಮೀರ್ ಒಬ್ಬರೇ ಅಲ್ಲ, ಇಡೀ ಒಂದು ಟೀಮೇ ಕೆಸಿನೋಗೆ ಹೋಗುತ್ತೆ. ರಾಜಕಾರಣಿಗಳ ಪಾಸ್ ಪೋರ್ಟ್ ಚೆಕ್ ಮಾ ಡಿದರೆ ಮಾಹಿತಿ ಸಿಗುತ್ತದೆ ಎಂದರು.

‘ಸರ್ಕಾರವು ತನ್ನ ತಪ್ಪುಗಳನ್ನು‌ ಮುಚ್ಚಿ ಹಾಕಿಕೊಳ್ಳಲು‌ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಾಟೆಯನ್ನು ತಂದಿಟ್ಟಿತು. ಈಗ ಡ್ರಗ್ಸ್ ಪ್ರಕರಣ ಹೊರತಂದಿದೆ’ ಎಂದು ಹೇಳಿದರು.

ಜೆಡಿಎಸ್, ಬಿಜೆಪಿ ಎರಡೂ ಪಕ್ಷಗಳು ಜಮೀರ್ ಅವರನ್ನು ಟಾರ್ಗೆಟ್ ಮಾಡಿದೆ ಎನ್ನುವುದು ಸರಿ ಅಲ್ಲ.
‘ನಾವು ಕಾಂಗ್ರೆಸ್ ಪರ ಇದ್ದು ಸರ್ಕಾರ ಮಾಡಿದವರು. ನ್ಯಾವ್ಯಾಕೆ ಅವರನ್ನು ಟಾರ್ಗೆಟ್ ಮಾಡ್ತೀವಿ?’ ಎಂದು ಮರುಪ್ರಶ್ನೆ ಹಾಕಿ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

Share This Article
Leave a comment