February 8, 2023

Newsnap Kannada

The World at your finger tips!

padmashri , award , actress

Padma Shri award for Kangana: Veteran Telugu actress Jayasudha upset ನಟಿ ಕಂಗನಾಗೆ ಪದ್ಮಶ್ರೀ ಪ್ರಶಸ್ತಿ : ಹಿರಿಯ ತೆಲುಗು ನಟಿ ಜಯಸುಧಾ ಅಸಮಾಧಾನ

ನಟಿ ಕಂಗನಾಗೆ ಪದ್ಮಶ್ರೀ ಪ್ರಶಸ್ತಿ : ಹಿರಿಯ ತೆಲುಗು ನಟಿ ಜಯಸುಧಾ ಅಸಮಾಧಾನ

Spread the love

ಪ್ರಶಸ್ತಿಗಳ ವಿಷಯದಲ್ಲಿ ಕೇಂದ್ರ ಸರಕಾರವು ತಾರತಮ್ಯ ಮಾಡುತ್ತಿದೆ ಎಂದು ದಕ್ಷಿಣದ ಖ್ಯಾತ ಹಿರಿಯ ನಟಿ ಜಯಸುಧಾ ಗಂಭೀರ ಆರೋಪ ಮಾಡಿದ್ದಾರೆ.

ನಟಿ ಕಂಗನಾ ರಣಾವತ್ ಅವರ ಹೆಸರನ್ನೇ ಪ್ರಸ್ತಾಪಿಸಿದ ಜಯಸುಧಾ ಕಂಗನಾ ಹತ್ತು ಸಿನಿಮಾಗಳಲ್ಲೂ ನಟಿಸಿಲ್ಲ. ಅವರ ಯಾವ ಸಾಧನೆಯನ್ನು ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದ್ದಾರೆ. ನೂರಾರು ಚಿತ್ರಗಳಲ್ಲಿ ನಟಿಸಿರುವ ದಕ್ಷಿಣದ ಕಲಾವಿದರಿಗೆ ಯಾಕೆ ಪದ್ಮಶ್ರೀ’ ಇಲ್ಲವೆಂದು ಪ್ರಶ್ನೆ ಮಾಡಿದ್ದಾರೆ.ಕೆ ಆರ್ ಪೇಟೆಯಲ್ಲಿ ಜನರಿಗೆ ಬೇಕಾಬಿಟ್ಟಿ ಬಿಂದಿಗೆ ಎಸೆದ ಜೆಡಿಎಸ್ ನಾಯಕರು, ಕಾರ್ಯಕರ್ತರು

ಬಾಲಕೃಷ್ಣ ನಡೆಸಿಕೊಡುವ ‘ಅನ್ ಸ್ಟಾಪಬಲ್ ಸೀಸನ್ 2’ನಲ್ಲಿ ಮಾತನಾಡಿದ ಜಯಸುಧಾ ದಕ್ಷಿಣದವರಿಗೆ ಮತ್ತು ಉತ್ತರದವರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ‘

ಐದತ್ತು ಸಿನಿಮಾಗಳನ್ನು ಮಾಡಿರುವವರಿಗೇ ಪದ್ಮ ಪ್ರಶಸ್ತಿಗಳು ದೊರೆಯುತ್ತವೆ ಅಂತಾದರೆ, ನಾವು ಲೆಕ್ಕಕ್ಕೆ ಇಲ್ಲ ಅವರಿಗೆ’ ಎಂದು ಕೇಂದ್ರ ಸರಕಾರವನ್ನು ತರಾಟೆಗೆ ತಗೆದುಕೊಂಡಿದ್ದಾರೆ.

error: Content is protected !!