ಕೆ ಆರ್ ಪೇಟೆಯಲ್ಲಿ ಜನರಿಗೆ ಬೇಕಾಬಿಟ್ಟಿ ಬಿಂದಿಗೆ ಎಸೆದ ಜೆಡಿಎಸ್ ನಾಯಕರು, ಕಾರ್ಯಕರ್ತರು

Team Newsnap
1 Min Read
JDS leaders and activists threw pot as gift to people ಕೆ ಆರ್ ಪೇಟೆಯಲ್ಲಿ ಜನರಿಗೆ ಬೇಕಾಬಿಟ್ಟಿ ಬಿಂದಿಗೆ ಎಸೆದ ಜೆಡಿಎಸ್ ನಾಯಕರು, ಕಾರ್ಯಕರ್ತರು

ಕೆಆರ್ ಪೇಟೆಯಲ್ಲಿ ಪಂಚರತ್ನ ಯಾತ್ರೆಯ ವೇಳೆ ಜೆಡಿಎಸ್ ನಾಯಕರು ಸ್ಟೀಲ್ ಬಿಂದಿಗೆಗಳನ್ನು ಮಹಿಳೆಯರಿಗೆ ಉಡುಗೊರೆ ನೀಡುವಾಗ ಗೌರವಯುತವಾಗಿ ಕೊಡದೆ ಬಿಂದಿಗೆಗಳನ್ನು ಕಾರ್ಯಕರ್ತರು ಮೂಲಕ ಬೇಕಾಬಿಟ್ಟಿ ಜನರತ್ತ ಎಸೆದಿದ್ದಾರೆ.

ಜೆಡಿಎಸ್ ಕಾರ್ಯಕರ್ತರ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕುಮಾರ ಸ್ವಾಮಿ ಅವರನ್ನು ಪೂರ್ಣ ಕುಂಭ ಸ್ವಾಗತಿಸಲು ಅಭ್ಯರ್ಥಿ ಮಂಜು 5 ಸಾವಿರ ಬಿಂದಿಗೆಗಳನ್ನು ತರಿಸಿದ್ದರು. ಆದರೆ ಪೂರ್ಣಕುಂಭ ಸಿದ್ಧತೆಗೆ ಕೇವಲ 1 ಸಾವಿರ ಬಿಂದಿಗೆಗಳನ್ನು ಬಳಸಲಾಗಿತ್ತು.

ಈ ವೇಳೆ ಉಳಿದ ಬಿಂದಿಗೆಗಳನ್ನು ಜೆಡಿಎಸ್ ಮುಖಂಡರು ಮಹಿಳೆಯರಿಗೆ ಗಿಫ್ಟ್ ನೀಡುವುದಾಗಿ ಘೋಷಿಸಿದ್ದಾರೆ.ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆಸ್ಪತ್ರೆಗೆ ದಾಖಲು

ಬಿಂದಿಗೆಗಳನ್ನು ಗೌರವಯುತವಾಗಿ ನೀಡದೇ ಕಾರ್ಯಕರ್ತರು ಜನರತ್ತ ಎಸೆದಿದ್ದಾರೆ. ಬಿಸ್ಕೆಟ್‌ನಂತೆ ಎಸೆಯುತ್ತಿದ್ದ ಬಿಂದಿಗೆಗಳನ್ನು ಕ್ಯಾಚ್ ಹಿಡಿಯಲು ಜನರು ಕ್ಯಾಂಟರ್ ಹಿಂದೆ ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ ಬಿಂದಿಗೆ ಎಸೆಯುತ್ತಿರುವ ವೀಡಿಯೋ ಹರಿದಾಡುತ್ತಿದೆ.

Share This Article
Leave a comment