ಪ್ರತಿ ಬಾರಿಯು ನಮ್ಮ ಜೆಡಿಎಸ್ ಶಾಸಕರ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಾರೆ. ಹೆಣ್ಣು ಮಕ್ಕಳ ಮೇಲೆ ನಮಗೂ ಗೌರವ ಇದೆ. ಅದನ್ನೇ ಬಂಡವಾಳ ಮಾಡಿಕೊಳ್ಳಬೇಡಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಂಸದೆ ಸುಮಲತಾ ಅಂಬರೀಷ್ ಗೆ ಎಚ್ಚರಿಕೆ ನೀಡಿದರು.
ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನಿಖಿಲ್ ಜೆಡಿಎಸ್ ಶಾಸಕರ ಮೇಲೆ ಸಂಸದೆ ಸುಮಲತಾ ವಾಗ್ದಾಳಿಗೆ ಪ್ರತಿಕ್ರಿಯಿಸಿ, ಸಂಸದರು ನಮ್ಮ ಶಾಸಕರ ವಿರುದ್ಧ ಕಿಡಿ ಹಚ್ಚುವ ಕೆಲಸ ಮಾಡ್ತಿದ್ದಾರೆ. ಪ್ರತಿ ಸಂದರ್ಭದಲ್ಲಿಯು ನಮ್ಮ ಶಾಸಕರ ಮೇಲೆ ಕೆಸರು ಎರಚುವ ಕೆಲಸ ಮಾಡಬೇಡಿ. ಅದರ ಬದಲು ಕೆಲಸದ ಮೂಲಕ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿ. ಹೆಣ್ಣು ಮಕ್ಕಳ ಮೇಲೆ ನಮಗೆ ಗೌರವ ಇದೆ. ಅದನ್ನು ನಿಮ್ಮ ಅನುಕೂಲಕ್ಕೆ ತಗೊಬೇಡಿ ಎಂದರು.
ನಾಲ್ಕೈದು ತಿಂಗಳ ಹಿಂದೆ ಮದ್ದೂರಿಗೆ ಹೋದ ಸಂದರ್ಭದಲ್ಲಿ ಡಿ.ಸಿ. ತಮ್ಮಣ್ಣ ಅವರ ಬಗ್ಗೆ ಅಗೌರವಿತವಾಗಿ ಸಂಸದರು ಮಾತನಾಡಿದರು. ಅ ವಿಷಯದ ಬಗ್ಗೆ ಮಾತನಾಡಿದಕ್ಕೆ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಹೆಣ್ಣು ಮಕ್ಕಳ ಮೇಲೆ ನಮಗೆ ಗೌರವ ಇದೆ. ನಾನು ಇಲ್ಲಿಯವರೆಗೆ ಅವರ ಬಗ್ಗೆ ಲಘುವಾಗಿ ಮಾತನಾಡಿಲ್ಲ ಎಂದು ಹೇಳಿದರು. ಜೆಡಿಎಸ್ ಯುವ ನಾಯಕ ನಿಖಿಲ್ – ಡಿಕೆಶಿ ಸಮಾಗಮ : ಉಭಯ ಕುಶಲೋಪರಿ ವಿಚಾರಿಸಿದ ನಾಯಕರು
ನಾನು ಸಂಸದರ ಬಗ್ಗೆ ಹೆಚ್ಚು ಚರ್ಚೆ ಮಾಡಲು ಹೋಗಲ್ಲ. ಉತ್ತರ ಕೊಡುವ ದಿನಗಳು ಬಹಳ ದೂರವಿಲ್ಲ. ಅದನ್ನು ನಾವು ರಾಜಕೀಯವಾಗಿ ಎದುರಿಸುತ್ತೇವೆ ಎಂದರು. ಆಣೆ-ಪ್ರಮಾಣದ ಸವಾಲು ವಿಚಾರವಾಗಿ ಪ್ರತಿಕ್ರಿಯಿಸಿದ ನಿಖಿಲ್, ಇದರ ಬಗ್ಗೆ ಮಾತನಾಡಲ್ಲ, ನಾನು ಇದ್ದಕ್ಕೆ ಸಿದ್ಧವೂ ಇಲ್ಲ. ನಾವು ಪಕ್ಷ ಸಂಘಟನೆಯ ಚಿಂತನೆ ಮಾತ್ರ ಮಾಡ್ತೇವೆ ಎಂದು ಹೇಳಿದರು.
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!