ಜೆಡಿಎಸ್ ಯುವ ನಾಯಕ ನಿಖಿಲ್ – ಡಿಕೆಶಿ ಸಮಾಗಮ : ಉಭಯ ಕುಶಲೋಪರಿ ವಿಚಾರಿಸಿದ ನಾಯಕರು

Team Newsnap
1 Min Read

ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಂಡ್ಯದಲ್ಲಿ ಪರಸ್ಪರ ಭೇಟಿಯಾಗಿ, ಪರಸ್ಪರ ಕೈ ಕುಲುಕಿ, ಉಭಯ ಕುಶಲೋಪರಿ ವಿಚಾರಿಸಿದರು.

ನಿಖಿಲ್ ಮತ್ತು ಡಿಕೆಶಿ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿ ಮುಖಾಮುಖಿ ಆಗಿದ್ದಾರೆ. ಮಾಜಿ ಸಚಿವ ಕೆ.ವಿ.ಶಂಕರಗೌಡರ ಪತ್ನಿ ನಿಧನ ಹಿನ್ನೆಲೆ ಸಾಂತ್ವನ ಹೇಳಲು ಬಂದಿದ್ದ ವೇಳೆ ಇಬ್ಬರು ಪರಸ್ಪರ ಭೇಟಿಯಾಗಿದ್ದಾರೆ. ಚೆಲುವರಾಯಸ್ವಾಮಿಯನ್ನು ಚೆಲುವಣ್ಣ ಎಂದು ಆತ್ಮೀಯವಾಗಿ ಮಾತನಾಡಿಸಿದ ನಿಖಿಲ್, ಕೆಲ ಕಾಂಗ್ರೆಸ್ಸಿಗರ ಕೈ ಕುಲುಕಿದರು.

ಕೆ.ವಿ.ಶಂಕರಗೌಡರ ಪತ್ನಿ ನಿಧನ ಹಿನ್ನೆಲೆ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಜೆಡಿಎಸ್-ಕಾಂಗ್ರೆಸ್ ನಾಯಕರು ತೆರಳಿದ್ದರು. ಈ ವೇಳೆ ಸಾಂತ್ವನ ಹೇಳಿ ನಿಖಿಲ್ ಕುಮಾರಸ್ವಾಮಿ ವಾಪಸ್ ಆಗುತ್ತಿದ್ದರು ಈ ವೇಳೆ ಸಾಂತ್ವನ ಹೇಳಲು ಕಾಂಗ್ರೆಸ್ ನಾಯಕರೂ ಆಗಮಿಸುತ್ತಿದ್ದರು . ಉಭಯ ನಾಯಕರಾದ ಡಿಕೆಶಿ ಮತ್ತು ನಿಖಿಲ್ ಪರಸ್ಪರ ಕೈ ಕುಲುಕಿದರು. ನಂತರ ನಿಖಿಲ್ ಎದೆ ಮತ್ತು ಭುಜಕ್ಕೆ ಗುದ್ದಿದ ಡಿಕೆಶಿ ಬಳಿಕ ಉಭಯ ಕುಶಲೋಪರಿ ವಿಚಾರಿಸಿಕೊಂಡರು. ಕೆಆರ್ ಪೇಟೆಯ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ಯುಪಿ ಸಿಎಂ ಯೋಗಿಆದಿತ್ಯನಾಥ

ಸಮಾಗಮನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಸಾಹೇಬರು ಒಬ್ಬ ಅನುಭವಿ ರಾಜಕಾರಣಿ. ಆಕಸ್ಮಿಕವಾಗಿ ಇಬ್ಬರೂ ಭೇಟಿಯಾಗಿದ್ದೇನೆ ಅಷ್ಟೇ. ಬೇರೆ ಏನು ಇಲ್ಲ. ಚಲುವರಾಯಸ್ವಾಮಿ ಅವರನ್ನು ಕೈ ಕುಲುಕಿ ಉಭಯ ಕುಶಲೋಪರಿ ವಿಚಾರಿಸಿದ್ದೇನೆ. ರಾಜಕೀಯವಾಗಿ ನಮ್ಮ ಭಿನ್ನಾಭಿಪ್ರಾಯ ಏನೇ ಇರಬಹುದು. ರಾಜಕೀಯವಾಗಿ ಉತ್ತರ ಕೊಡ್ತೇವೆ. ಅದನ್ನು ಹೊರತು ಪಡಿಸಿದ್ರೆ, ಯಾರ ಮೇಲೂ ನಮಗೆ ಅಸಮಾಧಾನ ಇಲ್ಲ. ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣೋದು ನಮ್ಮ ಸಂಸ್ಕೃತಿ. ಅದಕ್ಕೆಲ್ಲಾ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

Share This Article
Leave a comment