ಸ್ನೇಹಿತೆಯ ಮನೆಯಲ್ಲೇ 8 ಲಕ್ಷ ರು ಮೌಲ್ಯದ ಚಿನ್ನಾಭರಣ ಕದ್ದ ಕಳ್ಳಿ ಗೀತಾ ಬಂಧನ

Team Newsnap
1 Min Read

ಸ್ನೇಹಿತೆಯ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ್ದ ಮಹಿಳೆಯನ್ನು ಬೆಂಗಳೂರಿನ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಗೀತಾ ಬಂಧಿತಾ ಆರೋಪಿ. ಆಗಸ್ಟ್ 16ರಂದು ಗೀತಾ ವಿದ್ಯಾರಣ್ಯಪುರದಲ್ಲಿರುವ ತನ್ನ ಸ್ನೇಹಿತೆ ಲಕ್ಷ್ಮೀ ಮನೆಗೆ ಬಂದಿದ್ದಳು. ಕಳ್ಳತನದ ಉದ್ದೇಶದಿಂದ ಗೀತಾ, ಸ್ನೇಹಿತೆ ಮನೆಯಲ್ಲೇ ಉಳಿದುಕೊಂಡಿದ್ದಾಳೆ. ಚಿನ್ನಾಭಣದ ಡಿಸೈನ್ ನೋಡುವ ನೆಪದಲ್ಲಿ 8 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ಕದ್ದು ಗೀತಾ ಪರಾರಿಯಾಗಿದ್ದಳು. ಕೆಆರ್ ಪೇಟೆಯ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ಯುಪಿ ಸಿಎಂ ಯೋಗಿಆದಿತ್ಯನಾಥ

ಮನೆಯಲ್ಲಿ ಚಿನ್ನಾಭರಣ ಕಳ್ಳತನವಾದ ಬಗ್ಗೆ ಸ್ನೇಹಿತೆ ಲಕ್ಷ್ಮಿ ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಆರೋಪಿ ಗೀತಾಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 9.84 ಲಕ್ಷ ರೂಪಾಯಿ ಮೌಲ್ಯದ 216 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Share This Article
Leave a comment